
'ಕಾಮಿಡಿ ಕಿಲಾಡಿ' ರಾಕೇಶ್ ಪಂಚಭೂತಗಳಲ್ಲಿ ಲೀನ
Monday, May 12, 2025
ಲೋಕಬಂಧು ನ್ಯೂಸ್
ಉಡುಪಿ: ನಿಟ್ಟೆ ಸಮೀಪದ ಮನೆಯೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿರುವ ಕನ್ನಡದ ಕಿರುತೆರೆ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಲ್ಪೆ ರಾಕೇಶ್ ಪೂಜಾರಿ ಅಂತ್ಯಕ್ರಿಯೆ ಸೋಮವಾರ ಮಲ್ಪೆಯ ಹೂಡೆಯಲ್ಲಿ ನಡೆಯಿತು.
ಮನೆಯಿಂದ ಬೀಚ್ ವರೆಗೆ ಪಾರ್ಥೀವ ಶರೀರದ ಮೆರವಣಿಗೆ ನಡೆದಿದ್ದು, ಅನೇಕ ಮಂದಿ ಪಾಲ್ಗೊಂಡಿದ್ದರು.
ನಿರ್ದೇಶಕ ಯೋಗರಾಜ್ ಭಟ್, ಕಲಾವಿದರಾದ ಅನೀಶ್, ವಾಣಿ, ಹಿತೇಶ್, ಸೂರಜ್, ನಟಿ ನಯನ, ನಟ ಶಿವರಾಜ್ ಕೆಆರ್.ಪೇಟೆ ಮೊದಲಾದವರು ಅಂತಿಮ ದರ್ಶನ ಪಡೆದರು.