
ಬಾಡಿ ಪ್ಲೆಥಿಸ್ಮೋಗ್ರಾಫ್ ಉಪಕರಣ ಉದ್ಘಾಟನೆ
Friday, May 16, 2025
ಲೋಕಬಂಧು ನ್ಯೂಸ್,ಉಡುಪಿ
ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮೊದಲನೆಯದಾದ ಅತ್ಯಾಧುನಿಕ ಬಾಡಿ ಪ್ಲೆಥಿಸ್ಮೋಗ್ರಾಫ್ ಉಪಕರಣವನ್ನು ಗುರುವಾರ ಮಣಿಪಾಲ ಕೆಎಂಸಿ ಮಾಜಿ ಡೀನ್ ಡಾ.ಪದ್ಮರಾಜ ಹೆಗ್ಡೆ ಉದ್ಘಾಟಿಸಿದರು.
ಶ್ವಾಸಕೋಶ ಸಂಬಂಧಿ ರೋಗ ನಿರ್ಣಯದಲ್ಲಿ ಇದು ಪೂರಕವಾಗಲಿದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಆಸ್ತಮಾ ಮತ್ತು ಇಂಟರ್ಸ್ಟೀಷಿಯಲ್ ಶ್ವಾಸಕೋಶ ಕಾಯಿಲೆಯಂಥ ದೀರ್ಘಕಾಲದ ಉಸಿರಾಟದ ಅಸ್ವಸ್ಥತೆಗಳ ರೋಗನಿರ್ಣಯ ಮತ್ತು ಅನುಸರಣೆಯಲ್ಲಿ ಬಾಡಿ ಪ್ಲೆಥಿಸ್ಮೋಗ್ರಫಿ ಸಮಗ್ರ ತನಿಖಾ ಸಾಧನವಾಗಿದೆ. ಇದು ಹೊರರೋಗಿ ಮತ್ತು ಒಳರೋಗಿಗಳ ಆರೈಕೆಗಳೆರಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಬೋಧನಾ ಆಸ್ಪತ್ರೆಗಳ ಸಿಓಓ ಡಾ. ಆನಂದ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಶಿಲ್ಲರ್ ಹೆಲ್ತ್ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಆನಂದ ಕುಮಾರ್ ಮತ್ತು ಉಸಿರಾಟ ಔಷಧ ವಿಭಾಗದ ಪ್ರಾಧ್ಯಾಪಕ ಮತ್ತು ಹಾಗೂ ಮುಖ್ಯಸ್ಥ ಡಾ. ಮನು ಮೋಹನ್ ಕೆ. ಮೊದಲಾದವರಿದ್ದರು.