
ಕೃಷ್ಣಮಠದ ಸಿಬಂದಿ ನಾಪತ್ತೆ
Tuesday, May 27, 2025
ಲೋಕಬಂಧು ನ್ಯೂಸ್, ಉಡುಪಿ
ಕಳೆದ ಎರಡು ವರ್ಷಗಳಿಂದ ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಕೆಲಸ ಮಾಡಿಕೊಂಡು ಬಡಗು ಮಾಳಿಗೆಯ ಸಿಬ್ಬಂದಿ ವಸತಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಹರೀಂದ್ರ ಯು.ಆರ್. (48) ಮೇ 8ರಿಂದ ನಾಪತ್ತೆಯಾಗಿದ್ದಾರೆ.
5 ಅಡಿ 7 ಇಂಚು ಎತ್ತರ, ಅರ್ಧ ಬೊಕ್ಕ ತಲೆ, ಕೃಷ ಕಾಯ ಹೊಂದಿದ್ದು ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.
ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.