
ಗುರುಶ್ರೀ ಪ್ರಶಸ್ತಿಗೆ ಆಯ್ಕೆ
Tuesday, May 27, 2025
ಲೋಕಬಂಧು ನ್ಯೂಸ್, ಉಡುಪಿ
ರಾಷ್ಟ್ರ ಮತ್ತು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಹಿರಿಯಡಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸ್ಥಾಪಕಾಧ್ಯಕ್ಷ ರಾಘವೇಂದ್ರ ಮಲ್ಪೆ ಅವರು ತಮ್ಮ ದತ್ತಿ ನಿಧಿಯಿಂದ ನೀಡುವ ಗುರುಶ್ರೀ ಪ್ರಶಸ್ತಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಕನ್ನಡ ಉಪನ್ಯಾಸಕಿ ವಾಸಂತಿ ಅಂಬಲಪಾಡಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಕ್ಷೇತ್ರದ ಓರ್ವರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.
ವಾಸಂತಿ ಅಂಬಲಪಾಡಿ ಸಾಹಿತ್ಯ ಮಾತ್ರವಲ್ಲದೆ ವಿಶೇಷವಾಗಿ ಪಿಯುಸಿ ಮತ್ತು ಪದವಿ ತರಗತಿಗಳ 450ಕ್ಕಿಂತಲೂ ಹೆಚ್ಚು ಕನ್ನಡ ಪಾಠಗಳ ವೀಡಿಯೊಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅನೇಕ ಕೃತಿಗಳನ್ನು ವಿರಚಿಸಿದ್ದಾರೆ.
ಅವರು ಪತ್ರಿಕಾ ಛಾಯಾಗ್ರಾಹಕ ಗಣೇಶ ಕಲ್ಯಾಣಪುರ ಪತ್ನಿ.