ಕಾರ್ಕಳ ಮೆಸ್ಕಾಂ ಅಧಿಕಾರಿ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ
Saturday, May 31, 2025
ಲೋಕಬಂಧು ನ್ಯೂಸ್, ಕಾರ್ಕಳ
ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕಾರ್ಕಳ ಮೆಸ್ಕಾಂ ಅಕೌಂಟ್ಸ್ ಅಧಿಕಾರಿ ಗಿರೀಶ್ ರಾವ್ ಮನೆ ಹಾಗೂ ಕಚೇರಿ ಮೇಲೆ ಶನಿವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಗರದ ಪುಲ್ಕೇರಿಯಲ್ಲಿರುವ ಗಿರೀಶ್ ಮನೆ ಮತ್ತು ವಾಣಿಜ್ಯ ಸಂಕೀರ್ಣ ಸೇರಿದಂತೆ ಐದು ಕಡೆ ಲೋಕಾಯುಕ್ತ ಡಿವೈಎಸ್.ಪಿ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.