ಮತ್ತೆ ಬಾಲ ಬಿಚ್ಚಿದ ಪಾಕ್!
Monday, May 12, 2025
ಲೋಕಬಂಧು ನ್ಯೂಸ್
ಶ್ರೀನಗರ: ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಖಡಕ್ ಭಾಷಣ ಮಾಡಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಂಜಾಬ್ನ ಪಠಾನ್ಕೋಟ್ನಲ್ಲಿ ಇದೀಗ ಅನುಮಾನಾಸ್ಪದ ಡ್ರೋನ್ಗಳ ಹಾರಾಟ ಕಂಡುಬಂದಿರುವುದಾಗಿ ವರದಿಯಾಗಿದೆ.ಹಾಗೆಯೇ ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿಯೂ ಪಾಕಿಸ್ತಾನದ ಕಡೆಯಿಂದ ಡ್ರೋನ್ ಗಳು ಹಾರಾಟ ನಡೆಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಭಾರತದ ಕಡೆಯಿಂದ ಈ ಡ್ರೋನ್ಗಳನ್ನು ಹೊಡೆದುರುಳಿಸಲಾಗುತ್ತಿದೆ. ಈ ನಡುವೆ, ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ನಲ್ಲಿ ಸೈರನ್ ಮೊಳಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.