
ತಾಯಿಯನ್ನು ಕೊಂದು ಸುಟ್ಟ ಪಾಪಿ ಮಗನ ಸೆರೆ
Thursday, June 26, 2025
ಲೋಕಬಂಧು ನ್ಯೂಸ್, ಕುಂದಾಪುರ
ಕಾಸರಗೋಡು ಸಮೀಪದ ಮಂಜೇಶ್ವರ ವರ್ಕಾಡಿ ಎಂಬಲ್ಲಿ ತನ್ನ ತಾಯಿಯನ್ನು ಕೊಲೆಗೈದು ಸುಟ್ಟು ಹಾಕಿದ ಪ್ರಕರಣದ ಆರೋಪಿ ಪುತ್ರನನ್ನು ಮಂಜೇಶ್ವರ ಠಾಣೆ ಪೊಲೀಸರು ಗುರುವಾರ ಕೊಲ್ಲೂರು ಸಮೀಪ ಬಂಧಿಸಿದ್ದಾರೆ.
ವರ್ಕಾಡಿ ಸಮೀಪದ ನಿವಾಸಿ ಹಿಲ್ಡಾ ಮೊಂತೆರೊ ಪುತ್ರ ಮೆಲ್ವಿನ್ (33) ಬಂಧಿತ ಆರೋಪಿ.
ಮೊಬೈಲ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಕೊಲ್ಲೂರು ಸಮೀಪದ ಕಾಲ್ತೋಡು ಬ್ಯಾತಿಯಾನಿ ಎಂಬಲ್ಲಿ ಬಂಧಿಸಲಾಗಿದ್ದು, ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವಿನಯ್ ಕೆ. ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ಕೊಲ್ಲೂರು ಠಾಣೆಯ ಪರಯ್ಯ ಮಠಪತಿ, ಮಾಳಪ್ಪ ದೇಸಾಯಿ, ಚಿದಾನಂದ ಸಹಕರಿಸಿದರು.