
ಫೋರ್ತ್‌ಫೋಕಸ್'ಗೆ ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್
Wednesday, June 18, 2025
ಲೋಕಬಂಧು ನ್ಯೂಸ್, ಕುಂದಾಪುರ
ಇಲ್ಲಿನ ಡಿಜಿಟಲ್ ಸೊಲ್ಯೂಶನ್ ಸಂಸ್ಥೆ ಫೋರ್ತ್‌ಫೋಕಸ್'ನ್ನು ಬಿಸಿನೆಸ್ ಔಟ್‌ಲೈನ್ ಆಯೋಜಿಸಿದ ಬಿಸಿನೆಸ್ ಎಲೈಟ್ ಅವಾರ್ಡ್ 2025 ಕಾರ್ಯಕ್ರಮದಲ್ಲಿ '2025ರಲ್ಲಿ ಗಮನಹರಿಸಬಹುದಾದ ಅತ್ಯುತ್ತಮ ಸಂಸ್ಥೆ' ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.
ಈ ಪ್ರಶಸ್ತಿ ಭಾರತದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನವೀನತೆಗೆ ಪ್ರೋತ್ಸಾಹ ನೀಡುವ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಥೆಗಳನ್ನು ಗುರುತಿಸಿ ಪ್ರತಿ ವರ್ಷ ನೀಡುವುದಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಉದ್ಯಮದ ಮೇಲಿನ ಪರಿಣಾಮ, ನಾಯಕತ್ವ ಗುಣ ಮತ್ತು ಬೆಳವಣಿಗೆ ಸಾಮರ್ಥ್ಯಗಳನ್ನು ಪರಿಗಣಿಸಲಾಗುತ್ತದೆ.
ಫೋರ್ತ್‌ಫೋಕಸ್‌ನ್ನು ಈ ವರ್ಷದ ಅವಾರ್ಡ್‌ನ ಭಾಗವಾಗಿ ಆಯ್ಕೆ ಮಾಡಲಾಗಿದ್ದು, ಸಂಸ್ಥೆಯ ಸ್ಥಿರ ಸೇವಾ ದಕ್ಷತೆ ಮತ್ತು ಜಾಗತಿಕ ಕ್ಲೈಂಟ್ ನೆಟ್‌ವರ್ಕ್‌ಗೆ ಸಂದ ಗೌರವ ಇದಾಗಿದೆ.
2015ರಲ್ಲಿ ಏಕ ವ್ಯಕ್ತಿಯಿಂದ ಫ್ರೀಲಾನ್ಸ್ ಪ್ರಾರಂಭವಾಗಿ ಬೆಳೆದ ಫೋರ್ತ್‌ಫೋಕಸ್, ಇಂದು 8ಕ್ಕೂ ಅಧಿಕ ದೇಶಗಳಲ್ಲಿ 350ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುವ ಸಂಪೂರ್ಣ ಡಿಜಿಟಲ್ ಏಜೆನ್ಸಿಯಾಗಿ ಬೆಳೆದಿದೆ.
ಸಂಸ್ಥೆ ವರ್ಡ್‌ಪ್ರೆಸ್ ವೆಬ್‌ಸೈಟ್ ಅಭಿವೃದ್ಧಿ, ಫಿಗ್ಮಾ-ಇಲಿಮೆಂಟರ್ ಪರಿವರ್ತನೆ ಸೇರಿದಂತೆ, ಇ-ಕಾಮರ್ಸ್ ಅಭಿವೃದ್ಧಿ ಮತ್ತು ಕಸ್ಟಮ್ ವೆಬ್ ಅಪ್ಲಿಕೇಶನ್ ಪರಿಹಾರಗಳು, ಯುಐ/ಯುಎಕ್ಸ್ ವಿನ್ಯಾಸ, ಎಸ್ಇಓ ಆಪ್ಟಿಮೈಸೇಶನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳು, ಬ್ರಾಂಡಿಂಗ್ ಸೇವೆಗಳು, ಟ್ರೇಡ್‌ಮಾರ್ಕ್ ನೋಂದಣಿ ಮತ್ತು ಐಡೆಂಟಿಟಿ ವಿನ್ಯಾಸ, ಹೋಟೆಲ್ ತಂತ್ರಜ್ಞಾನ: ಬುಕ್ಕಿಂಗ್ ಎಂಜಿನ್, ಚಾನೆಲ್ ಮ್ಯಾನೇಜರ್ ಮತ್ತು ರೆವೆನ್ಯೂ ಮ್ಯಾನೇಜ್ಮೆಂಟ್ ಸಾಧನಗಳು ಇತ್ಯಾದಿ ಸೇವೆ ನೀಡುತ್ತಿದೆ.ನಾವು ಸೃಜನಾತ್ಮಕತೆ ಮತ್ತು ತಂತ್ರಜ್ಞಾನವನ್ನು ಸಮನ್ವಯವಾಗಿ ಬಳಸಿ ವ್ಯವಹಾರ ವೃದ್ಧಿಗೆ ಸಾಕ್ಷಿಯಾಗಲು ಮುಂದಾಗಿದ್ದೇವೆ. ಈ ಮಾನ್ಯತೆ ನಮ್ಮ ತಂಡದ ನಿರಂತರ ಶ್ರಮ ಮತ್ತು ದೃಢತೆಗಾಗಿ ಸಿಕ್ಕಿರುವ ಮಾನ್ಯತೆ ಎಂದು ಸಂಸ್ಥೆ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಹೇಳಿದ್ದಾರೆ.