-->
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ರಾಯಭಾರಿ ಕಂಗನಾ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ರಾಯಭಾರಿ ಕಂಗನಾ

ಲೋಕಬಂಧು ನ್ಯೂಸ್, ನವದೆಹಲಿ
2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾ ರಾಣಾವತ್ ಪೋಸ್ಟ್‌ ಮಾಡಿದ್ದಾರೆ.


ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಆಯೋಜನೆಗೊಂಡಿದ್ದು,ಭಾರತದ ಪ್ಯಾರಾ ಅಥ್ಲೆಟ್‌ಗಳು ಛಲ ಹಾಗೂ ಆತ್ಮವಿಶ್ವಾಸದಿಂದ ಪ್ರತಿದಿನವೂ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರನ್ನು ಬೆಂಬಲಿಸುವ ಹಾಗೂ ಅವರ ಅದ್ಭುತ ಸಾಧನೆ ಕುರಿತು ಜಾಗೃತಿ ಮೂಡಿಸುವ ಗೌರವ ನನಗೆ ಲಭಿಸಿರುವುದು ಸಂತೋಷ ತಂದಿದೆ.


ಪ್ಯಾರಾ ಕ್ರೀಡೆ ಕೇವಲ ಒಂದು ಸ್ಪರ್ಧೆಯಲ್ಲ, ಇದು ಧೈರ್ಯದ ಸಂಕೇತ. ನಮ್ಮ ಚಾಂಪಿಯನ್‌ಗಳ ಬೆನ್ನಿಗೆ ನಿಲ್ಲುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.


2025ರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ದೆಹಲಿಯಲ್ಲಿ ಆಯೋಜನೆಗೊಂಡಿದ್ದು, ಸೆ.26ರಿಂದ ಅ.5ರ ವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು 100 ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

Ads on article

Advertise in articles 1

advertising articles 2

Advertise under the article