'ದೇಸಿ ಊನ್' ಚಿತ್ರಕ್ಕೆ ಜ್ಯೂರಿ ಪ್ರಶಸ್ತಿ
Thursday, June 19, 2025
ಲೋಕಬಂಧು ನ್ಯೂಸ್, ನವದೆಹಲಿ
ಚಲನಚಿತ್ರ ನಿರ್ಮಾಪಕ ಸುರೇಶ್ ಎರಿಯತ್ ಅವರ ಅನಿಮೇಷನ್ ಚಿತ್ರ ‘ದೇಸಿ ಊನ್’ ಚಿತ್ರಕ್ಕೆ ಫ್ರಾನ್ಸ್‌ನಲ್ಲಿ ನಡೆದ 2025ರ ಆನೆಸಿ ಅಂತಾರಾಷ್ಟ್ರೀಯ ಅನಿಮೇಷನ್ ಉತ್ಸವದಲ್ಲಿ ಅತ್ಯುತ್ತಮ ಕಮಿಷನ್ಡ್ ಚಿತ್ರಕ್ಕಾಗಿ ಜ್ಯೂರಿ ಪ್ರಶಸ್ತಿ ಪಡೆದುಕೊಂಡಿದೆ.ಆ ಮೂಲಕ ಭಾರತೀಯ ಅನಿಮೇಷನ್‌ಗೆ ಅಂತಾರಾಷ್ಟ್ರೀಯ ಮೆಚ್ಚುಗೆ ತಂದುಕೊಟ್ಟಿದೆ.
ಈ ಚಿತ್ರ ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶ್ವ ಆಡಿಯೊ, ವೀಡಿಯೊ ಮತ್ತು ಮನರಂಜನಾ ಶೃಂಗಸಭೆ ವೇವ್ಸ್ 2025ರಲ್ಲಿ ಅತ್ಯುತ್ತಮ ಚಿತ್ರ ಎಂಬ ಮನ್ನಣೆ ಪಡೆದಿತ್ತು.