-->
ನರೇಗಾ ಯೋಜನೆ ದಿನಗೂಲಿ ಪಡೆದ ಸೀರೆಯುಟ್ಟ ಪುರುಷ!

ನರೇಗಾ ಯೋಜನೆ ದಿನಗೂಲಿ ಪಡೆದ ಸೀರೆಯುಟ್ಟ ಪುರುಷ!

ಲೋಕಬಂಧು ನ್ಯೂಸ್, ಇಳಕಲ್
ಪುರುಷನೊಬ್ಬ ಸೀರೆಯುಟ್ಟು ನರೇಗಾ ಯೋಜನೆಯಲ್ಲಿ ದಿನಗೂಲಿ ಪಡೆದಿದ್ದಾನೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಇಲ್ಲಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಅರಣ್ಯ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.


ಈ ಬಗ್ಗೆ ಚಿಕನಾಳ ಗ್ರಾಮ ಪಂಚಾಯತ್ ಪಿಡಿಒ ನಾಗರತ್ನ ಅವರನ್ನು ಸಂಪರ್ಕಿಸಿದಾಗ ಇದು ಅರಣ್ಯ ವಲಯದಲ್ಲಿ ನಡೆದ ಘಟನೆ. ಬಿಲ್'ಗೆ ಅದನ್ನು ಜೀರೋಗೊಳಿಸಿದ್ದಾಗಿ ಹೇಳಿದರು.


ಮಂಗಳಮ್ಮ ಹೆಸರಿನಲ್ಲಿ ಸೀರೆಯುಟ್ಟ ಫೋಟೊ ಪಂಚಾಯತ್ ವ್ಯಾಪ್ತಿಗಳಲ್ಲಿ ಓಡಾಡಿದೆ ಎಂಬ ಮಾತುಗಳು ಕೇಳಿಬಂದಿದ್ದು ಅವು ಬೇರೆ ತಾಲೂಕಿಗೆ ಸಂಬಂಧಪಟ್ಟಿವೆ.


ಮಂಗಳಮ್ಮ ಹೆಸರಿನ ಮಹಿಳೆಯ ಹಾಜರಾತಿ ಇದ್ದು ಫೋಟೋ ಇಲ್ಲದ ಕಾರಣ ಪುರುಷನೊಬ್ಬನಿಂದ ಇಂಥ ಕಾರ್ಯ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article