ಬಾಹ್ಯಾಕಾಶ ತಲುಪಿದ ಶುಕ್ಲಾ ತಂಡ
Thursday, June 26, 2025
ಲೋಕಬಂಧು ನ್ಯೂಸ್, ನವದೆಹಲಿ
ಭಾರತದ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಗಗನ ಯಾತ್ರಿಗಳನ್ನು ಹೊತ್ತ ಡ್ರ್ಯಾಗನ್ ಗಗನ ನೌಕೆ ಗುರುವಾರ ಸಂಜೆ ಅಂತಾ ರಾಷ್ಟ್ರೀಯ ಬಾಹ್ಯಾಕಾಶ (ಐಎಸ್‌ಎಸ್)ವನ್ನು ತಲುಪಿದೆ. ಆ ಮೂಲಕ ಐಎಸ್‌ಎಸ್ ತಲುಪಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಶುಭಾಂಶು ಪಾತ್ರರಾಗಿದ್ದಾರೆ.ಬಾಹ್ಯಾಕಾಶ ತಲುಪಿದ ಕೂಡಲೇ ಈ ಮೊದಲೇ ಒಳಗಿದ್ದ ಗಗನ ಯಾತ್ರಿಗಳು ಹೊಸ ತಂಡವನ್ನು ಸ್ವಾಗತಿಸಿದ್ದಾರೆ.
ಹದಿನಾಲ್ಕು ದಿನಗಳ ಪ್ರಯೋಗಗಳು ಶುಕ್ರವಾರದಿಂದಲೇ ಆರಂಭಗೊಳ್ಳಲಿವೆ.