ಜು.8-10: ಸಾಯಿ ದರ್ಬಾರ್ ಮಹೋತ್ಸವ
Monday, July 7, 2025
ಲೋಕಬಂಧು ನ್ಯೂಸ್, ಕಾಪು
ಶಂಕರಪುರ ದ್ವಾರಕಾಮಾಯಿ ಮಠ ವತಿಯಿಂದ ಗುರು ಪೂರ್ಣಿಮಾ ಪ್ರಯುಕ್ತ ಜುಲೈ 8ರಿಂದ 10ರ ವರೆಗೆ ಸಾಯಿ ದರ್ಬಾರ್ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ 7.30ರಿಂದ ಅಲಂಕಾರ ಪೂಜೆ, ಪಾದುಕಾ ಪೂಜೆ ನಡೆಯಲಿದೆ.
ಬೆಳಿಗ್ಗೆ 8ರಿಂದ ಅಖಂಡ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ, ಮಧ್ಯಾಹ್ನ 12ರಿಂದ ಆರತಿ ಬಳಿಕ ಅನ್ನಪ್ರಸಾದ ಆಯೋಜಿಸಲಾಗಿದೆ.
ಸಂಜೆ 6ರಿಂದ ಸಚ್ಚರಿತ್ರೆ ಸಮಾಪ್ತಿ, 6.30ರಿಂದ ಆರತಿ ಬಳಿಕ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜು.10ರಂದು ಬೆಳಿಗ್ಗೆ 7ರಿಂದ ಪಂಚಾಮೃತ ಅಭಿಷೇಕ, 8ರಿಂದ ಅಲಂಕಾರ ಪೂಜೆ, ಪಾದುಕಾ ಪೂಜೆ, ಬೆಳಿಗ್ಗೆ 9.30ರಿಂದ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಬವಳಾಡಿ ಅವರಿಂದ ಭಕ್ತಿ ಗಾಯನ, 10.30ರಿಂದ ಶಿಷ್ಯ, ಅಭಿಮಾನಿ ಭಕ್ತರಿಂದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಗೆ ಗುರುವಂದನೆ, ಮಧ್ಯಾಹ್ನ 12ರಿಂದ ಆರತಿ, ಬಳಿಕ ಅನ್ನಪ್ರಸಾದ ನಡೆಯಲಿದೆ.
ಸಂಜೆ 4ರಿಂದ ಶ್ರೀ ಸಾಯಿ ದರ್ಬಾರ್ ಹಾಗೂ ಸಾಧಕರಿಗೆ ಈಶ್ವರಾನುಗ್ರಹ ಗೌರವ ಪ್ರದಾನ, ಸಂಜೆ 6.30ರಿಂದ ಪಲ್ಲಕ್ಕಿ ಉತ್ಸವ, 7ರಿಂದ ಆರತಿ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.