ಮೋಹಿಸಿ ವಂಚಿಸಿದ ಯುವಕನ ಬಂಧನ
Sunday, July 6, 2025
ಲೋಕಬಂಧು ನ್ಯೂಸ್, ಪುತ್ತೂರು
ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿಯನ್ನಾಗಿಸಿ ಮಗು ಕರುಣಿಸಿ ತಲೆಮರೆಸಿಕೊಂಡಿರುವ ಯುವಕ, ಇಲ್ಲಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್'ನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.ದ.ಕ. ಎಸ್‌ಪಿ ಡಾ.ಅರುಣ್ ಕೆ. ನಿರ್ದೇಶನದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಕಾರ್ಯಾಚರಣೆಯಲ್ಲಿ ಆರೋಪಿ ಕೃಷ್ಣ ಜೆ.ರಾವ್‌ನನ್ನು ಟಿ.ನರಸಿಪುರದಲ್ಲಿ ಬಂಧಿಸಲಾಗಿದೆ.
ಈಮಧ್ಯೆ, ಆರೋಪಿಯ ತಂದೆ ಜಗನ್ನಿವಾಸ ರಾವ್'ನನ್ನೂ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಮಗ ಕೃಷ್ಣ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ.