ಪ್ರಚೋದನಾತ್ಮಕ ಹೇಳಿಕೆ: ರಿಯಾಝ್ ಕಡುಂಬು ವಿರುದ್ಧ ಕೇಸು ದಾಖಲು
Saturday, July 5, 2025
ಲೋಕಬಂಧು ನ್ಯೂಸ್, ಉಡುಪಿ
ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ಗೋವು ರುಂಡ ಪ್ರಕರಣದ ಹಿನ್ನೆಲೆಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಝ್ ಕಡುಂಬು ವಿರುದ್ಧ ಉಡುಪಿ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.ಕಡುಂಬು ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಕುಂಜಾಲು ಪ್ರಕರಣ ಸಂಘಪರಿವಾರದವರ ಪೂರ್ವಯೋಜಿತ ಕೃತ್ಯ ಎಂಬ ಸಂದೇಹ ಇದೆ ಎಂದು ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾದೀತು ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು ರಿಯಾಝ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.