-->
ಬೈಂದೂರು ಬಂಟರ ಸಂಘದ ನೂತನ ವೆಬ್‌ಸೈಟ್ ಮತ್ತು ಗ್ರಂಥಾಲಯ ಉದ್ಘಾಟನೆ

ಬೈಂದೂರು ಬಂಟರ ಸಂಘದ ನೂತನ ವೆಬ್‌ಸೈಟ್ ಮತ್ತು ಗ್ರಂಥಾಲಯ ಉದ್ಘಾಟನೆ

ಲೋಕಬಂಧು ನ್ಯೂಸ್, ಬೈಂದೂರು
ಇಲ್ಲಿನ ಬಂಟರ ಯಾನೆ ನಾಡವರ ಸಂಘದ ಅಧಿಕೃತ ವೆಬ್‌ಸೈಟ್ Bansbyndoor.com ಹಾಗೂ ನೂತನ ಗ್ರಂಥಾಲಯವನ್ನು ಬಂಟರ ಭವನದಲ್ಲಿ ಸ್ಥಳೀಯ ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು.
ಲ್ಯಾಪ್‌ಟಾಪ್‌ನಲ್ಲಿ ಬಟನ್ ಒತ್ತುವ ಮೂಲಕ ವೆಬ್‌ಸೈಟ್‌ ಉದ್ಘಾಟಿಸಿ, ಜ್ಯೋತಿ ಬೆಳಗುವ ಮೂಲಕ ಗ್ರಂಥಾಲಯ ಉದ್ಘಾಟಿಸಿದರು.
ವೆಬ್‌ಸೈಟ್‌ ಮುಖಾಂತರ ವಿದ್ಯಾರ್ಥಿ ವೇತನ, ಸಾಧಕರ ಸನ್ಮಾನ ಹಾಗೂ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಮಾಹಿತಿ ಇತ್ಯಾದಿ ಸಮಾಜದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದರು.


ಸಂಘದ ಅಧ್ಯಕ್ಷ ಸಾಲ್ಗದ್ದೆ ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು, ಗೋಕುಲ್ ಶೆಟ್ಟಿ ಉಪ್ಪುಂದ ಮತ್ತು ಕರುಣಾಕರ್ ಶೆಟ್ಟಿ ತೆಗ್ಗರ್ಸೆ, ಮಾಜಿ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ ಹಾಗೂ ಪದಾಧಿಕಾರಿಗಳಾದ ಚುಚ್ಚಿ ನಾರಾಯಣ ಶೆಟ್ಟಿ, ನಿತಿನ್ ಶೆಟ್ಟಿ ಬೈಂದೂರು, ಜೈರಾಮ್ ಶೆಟ್ಟಿ ಗಂಟಿಹೊಳೆ, ಜೈರಾಮ್ ಶೆಟ್ಟಿ ಬಿ., ಸಂತೋಷ್ ಶೆಟ್ಟಿ ಬೈಂದೂರು, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ದಿವಾಕರ್ ಶೆಟ್ಟಿ ನೆಲ್ಯಾಡಿ, ದಿವಾಕರ್ ಶೆಟ್ಟಿ ಉಪ್ಪುಂದ, ಮಹಿಳಾ ಪದಾಧಿಕಾರಿಗಳಾದ ಮಮತಾ ಶೆಟ್ಟಿ ಮತ್ತು ಉಷಾ ಶೆಟ್ಟಿ ಇದ್ದರು.


ವೆಬ್‌ಸೈಟ್ ಅಭಿವೃದ್ಧಿಪಡಿಸಿದ ಕುಂದಾಪು ಫೋರ್ಥ್ ಫೋಕಸ್ ನಿರ್ದೇಶಕ ವಿ. ಗೌತಮ್ ನಾವಡ ಇದ್ದರು.


ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರ್ ಸ್ವಾಗತಿಸಿ, ನಿರೂಪಿಸಿದರು. ಜಯರಾಮ್ ಶೆಟ್ಟಿ ಬಿ. ವಂದಿಸಿದರು.

Ads on article

Advertise in articles 1

advertising articles 2

Advertise under the article