-->
ಮಠಾಧಿಪತಿಗಳ ಚಾತುರ್ಮಾಸ್ಯ ವ್ರತಾಚರಣೆ

ಮಠಾಧಿಪತಿಗಳ ಚಾತುರ್ಮಾಸ್ಯ ವ್ರತಾಚರಣೆ

ಲೋಕಬಂಧು ನ್ಯೂಸ್, ಉಡುಪಿ
ಆಷಾಢ ಶುದ್ಧ ಪೌರ್ಣಿಮೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಅಂದು ಗುರು ಪೂರ್ಣಿಮೆಯ ಪಾವನ ದಿನ. ಸರ್ವ ಗುರುಗಳಿಗೂ ಗುರುಗಳಾಗಿರುವ ಭಗವಾನ್ ಶ್ರೀ ವೇದವ್ಯಾಸರು ಆವಿರ್ಭವಿಸಿದ ಸುದಿನ.
ಸಾಮಾನ್ಯವಾಗಿ ಈ ದಿನದಂದು ಬಹುತೇಕ ಎಲ್ಲಾ ಮಠಾಧೀಶರು ಚಾತುರ್ಮಾಸ್ಯ ವ್ರತ ದೀಕ್ಷೆ ಪಡೆಯುತ್ತಾರೆ. ಕೆಲವು ಮಾಧ್ವ ಯತಿಗಳು ಆಷಾಢ ಬಹುಳ ಪಂಚಮಿ ಟೀಕಾಚಾರ್ಯರ ಆರಾಧನೆಯಂದು ಚಾತುರ್ಮಾಸ್ಯ ವ್ರತದೀಕ್ಷಿತರಾಗುವ ಕ್ರಮವುಂಟು.


ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತಾರಂಭ ಮಾಡಿ ಭಾದ್ರಪದ ಹುಣ್ಣಿಮೆಗೆ ಪರಿಸಮಾಪ್ತ ಮಾಡುವುದು ರೂಢಿ.


ಒಂದೊಂದು ಪಕ್ಷವನ್ನು ಮಾಸ ಎಂದು ಪರಿಗಣಿಸಿ ನಾಲ್ಕು ಪಕ್ಷಗಳ ಪರ್ಯಂತ ಎರಡು ತಿಂಗಳ ಕಾಲ ಕೈಗೊಳ್ಳುವ ಚಾತುರ್ಮಾಸ್ಯ ಕಾಲದಲ್ಲಿ ಪರಿವ್ರಾಜಕರಾದ ಯತಿಗಳು ಚಾತುರ್ಮಾಸ್ಯದ ಅಷ್ಟೂ ದಿನಗಳ ಕಾಲ ಒಂದೆಡೆ ನೆಲೆನಿಂತು ಶಿಷ್ಯರಿಗೆ ಉಪದೇಶ, ಪ್ರವಚನ ಇತ್ಯಾದಿ ನಡೆಸುತ್ತಾರೆ. ಗೃಹಸ್ಥರಿಗೆ ಗುರು ಸೇವೆ ಮಾಡುವ ಪುಣ್ಯತಮ ಅವಕಾಶ. ಚಾತುರ್ಮಾಸ್ಯದಲ್ಲಿ ಗುರು ಸೇವೆ ಶ್ರೇಯಸ್ಕರ ಎಂಬ ನಂಬಿಕೆ ಇದೆ.


ಈ ಬಾರಿ ವಿವಿಧ ಮಠಾಧೀಶರು ವಿವಿಧೆಡೆ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುತ್ತಾರೆ.


ಶೃಂಗೇರಿ ಜಗದ್ಗುರುಗಳು
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಶೃಂಗೇರಿ ನೃಸಿಂಹವನದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತಾಚರಣೆ ಮಾಡುವರು.


ಶ್ರೀ ರಾಮಚಂದ್ರಾಪುರ ಮಠಾಧೀಶರು
ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೋಕರ್ಣ ಅಶೋಕೆಯಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ದೀಕ್ಷೆ ಕೈಗೊಳ್ಳುವರು.


ಸ್ವರ್ಣವಲ್ಲೀ ಮಠಾಧೀಶರು
ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಸ್ವರ್ಣವಲ್ಲೀ ಮಠದಲ್ಲಿ ಚಾತುರ್ಮಾಸ್ಯ ವ್ರತ ದೀಕ್ಷಿತರಾಗುವರು.


ಪುತ್ತಿಗೆ ಮಠಾಧೀಶರು
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಕೃಷ್ಣಮಠದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ದೀಕ್ಷಿತರಾಗುವರು.


ಪಲಿಮಾರು ಮಠಾಧೀಶರು
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹರಿದ್ವಾರ ಗಂಗಾ ತೀರದ ಶ್ರೀ ಬಡೇಹನುಮಾನ್ ಮಂದಿರದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಪೇಜಾವರ ಮಠಾಧೀಶರು
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 6ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಶೀರೂರು ಮಠಾಧೀಶರು
ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜುಲೈ 15ರಿಂದ ಸೆಪ್ಟೆಂಬರ್ 6ರ ವರೆಗೆ ಚಾತುರ್ಮಾಸ್ಯ ವ್ರತದೀಕ್ಷೆ ಕೈಗೊಳ್ಳುವರು.

ಕೃಷ್ಣಾಪುರ ಮಠಾಧೀಶರು
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಜುಲೈ 15ರಿಂದ ಉಡುಪಿ ರಥಬೀದಿ ಕೃಷ್ಣಾಪುರ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಕಾಣಿಯೂರು ಮಠಾಧೀಶರು
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಚೆನ್ನೈ ಅಣ್ಣಾನಗರದ ಪಲಿಮಾರು ಮಠದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು


ಅದಮಾರು ಮಠಾಧೀಶರು
ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಜು.15ರಿಂದ ಉಡುಪಿ ರಥಬೀದಿ ಅದಮಾರು  ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜು.10ರಿಂದ ತಮಿಳುನಾಡಿನ ಘಟಿಕಾಚಲ ಕ್ಷೇತ್ರದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಸೋದೆ ಮಠಾಧೀಶರು
ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜು. 10ರಿಂದ ಸೋಂದಾ ಕ್ಷೇತ್ರದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಎಡತೊರೆ ಮಠಾಧೀಶರು
ಮೈಸೂರು ಎಡತೊರೆ ಯೋಗಾನಂದೇಶ್ವರ ಮಠದ ಹಿರಿಯ ಯತಿ ಶ್ರೀ ಶಂಕರಭಾರತೀ ಮಹಾಸ್ವಾಮೀಜಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಶ್ರೀ ಆತ್ಮದರ್ಶನ ಯೋಗಾಶ್ರಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.
ಕಿರಿಯ ಯತಿ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಮೈಸೂರು ವಿಜಯನಗರ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಉತ್ತರಾದಿ ಮಠಾಧೀಶರು
ಶ್ರೀ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಜು. 20ರಿಂದ ಸೆ. 7ರ ವರೆಗೆ ಹೈದರಾಬಾದ್ ಭಾಗ್ಯನಗರ ಶ್ರೀ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಮಂತ್ರಾಲಯ ಮಠಾಧೀಶರು
ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಜು. 22ರಿಂದ ಸೆ. 7ರ ವರೆಗೆ ಮಂತ್ರಾಲಯದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಭಂಡಾರಕೇರಿ ಮಠಾಧೀಶರು
ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಜು.15ರಿಂದ ಸೆಪ್ಟೆಂಬರ್ 7ರ ವರೆಗೆ ಮಂಗಳೂರು ಬಜಿಲಕೇರಿ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಆನೆಗೊಂದಿ ಮಠಾಧೀಶರು
ಆನೆಗೊಂದಿ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಕಾಪು ಕುತ್ಯಾರು ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಚಾತುರ್ಮಾಸ್ಯ ವ್ರತದೀಕ್ಷಿತರಾಗುವರು.


ನೆಲೆಮಾವು ಮಠಾಧೀಶರು
ಉತ್ತರ ಕನ್ನಡ ಜಿಲ್ಲೆಯ ಶ್ರೀಮನ್ನೆಲೆಮಾವು ಮಠಾಧೀಶ ಶ್ರೀ ಮಾಧವಾಶ್ರಮ ಭಾರತೀ ಸ್ವಾಮೀಜಿ ಜು. 10ರಿಂದ ಸೆ. 7ರ ವರೆಗೆ ಮನ್ನೆಲೆಮಾವು ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಎಡನೀರು ಮಠಾಧೀಶರು
ಕಾಸರಗೋಡು ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಜು. 10ರಿಂದ ಸೆ.7ರ ವರೆಗೆ ಎಡನೀರು ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಹರಿಹರಪುರ ಮಠಾಧೀಶರು
ಹರಿಹರಪುರ ಮಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಜು. 10ರಿಂದ ಸೆ. 7ರ ವರೆಗೆ ಬೆಂಗಳೂರು ಜಯನಗರ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಚಿಂತಾಮಣಿ ಮಠಾಧೀಶರು
ಹೊಸಪೇಟೆ ಶ್ರೀ ಚಿಂತಾಮಣಿ ಮಠಾಧೀಶ ಶ್ರೀ ಶಿವಾನಂದಭಾರತೀ ಸ್ವಾಮೀಜಿ ಜು.10ರಿಂದ ಸೆ. 7ರ ವರೆಗೆ  ವಿಜಯನಗರ ಹೊಸಪೇಟೆ ಅಮರಾವತಿ ಶ್ರೀ ಚಿಂತಾಮಣಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಶ್ರೀರಾಮ ಕ್ಷೇತ್ರ ಮಠಾಧೀಶರು
ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಮಠಾಧೀಶ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಕುಮಟಾ ಕೋನಳ್ಳಿ ಶ್ರೀ ವನದುರ್ಗಾ ದೇವಾಲಯದಲ್ಲಿ ಜುಲೈ 10ರಿಂದ ಆ.20 ರ ವರೆಗೆ ಚಾತುರ್ಮಾಸ್ಯ ಕೈಗೊಳ್ಳುವರು.


ಕೊಂಡೆವೂರು ಮಠಾಧೀಶರು
ಕಾಸರಗೋಡು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಜು.10ರಿಂದ ಸೆ.7ರ ವರೆಗೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಸೋಸಲೆ ಮಠಾಧೀಶರು
ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಜು.22ರಿಂದ ಸೆ.8ರ ವರೆಗೆ ಬೆಂಗಳೂರು ಗಾಂಧಿನಗರ ಶ್ರೀ ಸೋಸಲೆ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಹಂಪಿ ವಿರೂಪಾಕ್ಷ ಮಠಾಧೀಶರು
ಹಂಪಿ ಶ್ರೀ ವಿರೂಪಾಕ್ಷ ಮಠಾಧೀಶ ಶ್ರೀ ವಿದ್ಯಾರಣ್ಯಭಾರತೀ ಸ್ವಾಮೀಜಿ ಜು. 10ರಿಂದ ಸೆ. 7ರ ವರೆಗೆ ಹಂಪಿ ಶ್ರೀ ವಿರೂಪಾಕ್ಷ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಭೀಮನಕಟ್ಟೆ ಮಠಾಧೀಶರು
ತೀರ್ಥಹಳ್ಳಿ ಭೀಮನಕಟ್ಟೆ ಮಠಾಧೀಶ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು ಜು.20ರಿಂದ ಸೆ. 7ರ ವರೆಗೆ ಕುಂದಾಪುರ ಕೋಟೇಶ್ವರ ಶ್ರೀ ಕೋದಂಡರಾಮ ಮಂದಿರದಲ್ಲಿ ಜು. 10ರಿಂದ ಸೆ.7ರ ವರೆಗೆ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಕಾಶಿ ಮಠಾಧೀಶರು
ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಜು.15ರಿಂದ ಅ.26ರ ವರೆಗೆ ಕುಂದಾಪುರ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಗೋಕರ್ಣ ಪರ್ತಗಾಳಿ ಮಠಾಧೀಶರು
ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಜು.17ರಿಂದ ಸೆ.7ರ ವರೆಗೆ ವಾರಣಾಸಿ ಪಂಚಗಂಗಾ ಘಾಟ್ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಚಿತ್ರಾಪುರ ಮಠಾಧೀಶರು
ಭಟ್ಕಳ ಶಿರಾಲಿ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಜು. 17ರಿಂದ ಸೆ. 7ರ ವರೆಗೆ ಶಿರಾಲಿ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಕವಳೆ ಮಠಾಧೀಶರು
ಕವಳೆ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಜು.17ರಿಂದ ಸೆ. 7ರ ವರೆಗೆ ಮುಂಬೈ ವಾಲುಕೇಶ್ವರ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಹಳದೀಪುರ ಮಠಾಧೀಶರು
ಹೊನ್ನಾವರ ಹಳದೀಪುರ ಶಾಂತಾಶ್ರಮದ ಶ್ರೀ ವಾಮನಾಶ್ರಮ ಸ್ವಾಮೀಜಿ ಜು.17ರಿಂದ ಸೆ. 7ರ ವರೆಗೆ ಆಂಧ್ರಪ್ರದೇಶ ಗುಂಟೂರು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಆಚಾರ್ಯ ಗುಲಾಬ್ ಭೂಷಣ್ ಮಹಾರಾಜ್
ಜೈನ ಭಟ್ಟಾರಕ ಆಚಾರ್ಯ ಶ್ರೀ ಗುಲಾಬ್ ಭೂಷಣ್ ಮಹಾರಾಜ್ ಜು.9ರಿಂದ ಮೂಡುಬಿದಿರೆ ಜೈನ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.


ಮೂಡುಬಿದಿರೆ ಜೈನ ಭಟ್ಟಾರಕರು
ಮೂಡುಬಿದಿರೆ ಜೈನ ಮಠದ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜು.9ರಿಂದ ಮೂಡುಬಿದಿರೆ ಜೈನ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುವರು.

Ads on article

Advertise in articles 1

advertising articles 2

Advertise under the article