
ಕೃಷ್ಣ ಮಂಡಲೋತ್ಸವಕ್ಕೆ ಮುಖ್ಯಮಂತ್ರಿಗೆ ಆಹ್ವಾನ
Tuesday, July 8, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಆಗಸ್ಟ್ 1ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಸಲುದ್ದೇಶಿಸಿರುವ ಶ್ರೀಕೃಷ್ಣ ಮಂಡಲೋತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಯಿತು.
ಶ್ರೀಮಠದ ಪರವಾಗಿ ಬೆಂಗಳೂರು ಪುತ್ತಿಗೆ ಶಾಖಾಮಠದ ಮುಖ್ಯಸ್ಥ ಎ.ಬಿ.ಕುಂಜಾರು ಮತ್ತು ಪುತ್ತಿಗೆ ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಶ್ರೀಕೃಷ್ಣ ಪ್ರಸಾದ ನೀಡಿದರು.