ಸಿಎ/ಸಿಎಂಎ ಪರೀಕ್ಷೆಯಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ
Tuesday, July 8, 2025
ಲೋಕಬಂಧು ನ್ಯೂಸ್, ಉಡುಪಿ
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ ತಿಂಗಳಲ್ಲಿ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಇಲ್ಲಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ವಿಷ್ಣು ಭಟ್ (291), ಕೃಪೇಶ್ ಜಿ.ಎ. (242), ರೀಫತ್ ಫಾತಿಮಾ (235), ಸೃಜನ್ ಡಿ. ಶೆಟ್ಟಿಗಾರ್ (216), ಅಂಕಿತ್ ಅಜಿತ್ ನಾಯಕ್ (212) ಮತ್ತು ಮೇಘಶ್ಯಾಮ್ ಪದ್ಮಶಾಲಿ (209) ಹಾಗೂ ದಿ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎಂಎ ಫೌಂಡೇಶನ್ ಪರೀಕ್ಷೆಯಲ್ಲಿ ರಕ್ಷಿತ್ ಸಾಲಿಯಾನ್ (200) ಮತ್ತು ಅನಿರುದ್ಧ ಆರ್. ಪೈ (200) ಅಂಕ ಗಳಿಸಿ ಸಿ.ಎ. ಇಂಟರ್ ಮೀಡಿಯೇಟ್ ಹಾಗೂ ಸಿಎಂಎ ಇಂಟರ್ ಮೀಡಿಯೇಟ್'ಗೆ ಅರ್ಹತೆ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕಾರ್ಯದರ್ಶಿ ಡಾ.ಪಿ.ಎಸ್.ಐತಾಳ್ ಹಾಗೂ ಸಿಎ/ಸಿಎಂಎ ಸಂಯೋಜಕ ಮತ್ತು ಪ್ರಾಂಶುಪಾಲ ಸಂತೋಷ್ ಕುಮಾರ್ ಅಭಿನಂದಿಸಿದ್ದಾರೆ.