-->
ವಿದ್ಯಾರ್ಥಿಗೆ ಕನಸು ಮತ್ತು ದೂರದೃಷ್ಟಿ ಬಹುಮುಖ್ಯ

ವಿದ್ಯಾರ್ಥಿಗೆ ಕನಸು ಮತ್ತು ದೂರದೃಷ್ಟಿ ಬಹುಮುಖ್ಯ

ಲೋಕಬಂಧು ನ್ಯೂಸ್, ಕಾರ್ಕಳ
ಯೋಜನಾಬದ್ಧ ಅಧ್ಯಯನ ಮತ್ತು ಶಿಸ್ತುಬದ್ಧ ಕಲಿಕೆಯಿಂದ ಉನ್ನತ ಗುರಿ ತಲುಪಲು ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಜಾಗತೀಕರಣ ಮತ್ತು ತಂತ್ರಜ್ಞಾನಗಳ ಬಳಕೆಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಇಂದು ಉದ್ಯೋಗಾವಕಾಶಗಳು ಹೆಚ್ಚಿನ ಯುವಜನತೆಯನ್ನು ಆಕರ್ಷಿಸುತ್ತಿವೆ. ವಿದ್ಯಾರ್ಥಿಗೆ ಕನಸು ಮತ್ತು ದೂರದೃಷ್ಟಿ ಬಹುಮುಖ್ಯ ಎಂದು ತ್ರಿಷಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು.
ಇಲ್ಲಿನ ಗಣಿತನಗರ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನಡೆದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬಿ.ಕಾಂ ಪದವಿ ಜೊತೆಗೆ ಸಿಎ ಮಾಡಬಹುದು ಎಂದ ಅವರು, ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅತ್ಯಂತ ಪ್ರತಿಷ್ಠಿತ ಮತ್ತು ಹೆಚ್ಚು ಪ್ರತಿಫಲ ನೀಡುವ ವೃತ್ತಿ ಆಯ್ಕೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಕಂಪೆನಿ ಸೆಕ್ರೆಟರಿ, ಎ.ಸಿ.ಸಿ.ಎ, ಸಿ.ಐ,ಎಂ,ಎ, ಎನ್.ಸಿ.ಎಫ್.ಎಂ, ಸಿ.ಎಂ.ಎ ಇತ್ಯಾದಿ ಎಲ್ಲಾ ಕೋರ್ಸುಗಳ ಮಾಹಿತಿ ನೀಡಿದರು.


ಕಾಲೇಜಿನ ಉಪಪ್ರಾಂಶುಪಾಲೆ ಉಷಾ ರಾವ್ ಯು, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಮಿಥುನ್ ಯು., ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ, ಉಪನ್ಯಾಸಕರಾದ ಶೈಲೇಶ್ ಶೆಟ್ಟಿ ಮತ್ತು ಶ್ರೀ ಮಂಜುನಾಥ್ ಮುದೂರು ಇದ್ದರು.


ಕಾಲೇಜಿನ ಉಪಪ್ರಾಂಶುಪಾಲೆ ಸಾಹಿತ್ಯ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article