
ಡ್ರಗ್ಸ್ ಜಾಲ: ಸಮಗ್ರ ತನಿಖೆಗೆ ಒತ್ತಾಯ
Saturday, July 5, 2025
ಲೋಕಬಂಧು ನ್ಯೂಸ್, ಉಡುಪಿ
ಎನ್.ಸಿ.ಬಿ ಅಧಿಕಾರಿಗಳು ಮಾದಕ ದ್ರವ್ಯ ಪೂರೈಕೆ ಪ್ರಕರಣದಲ್ಲಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಮುಖ್ಯಸ್ಥನನ್ನು ಬಂಧಿಸುವ ಮೂಲಕ ಉಡುಪಿ- ಮಣಿಪಾಲ ಪರಿಸರದಲ್ಲಿ ಡ್ರಗ್ಸ್ ಜಾಲ ದೊಡ್ಡ ಮಟ್ಟದಲ್ಲಿ ಬೇರೂರಿದೆ ಎಂಬ ಅಂಶವನ್ನು ಬಯಲಿಗೆಳೆದಿದ್ದು, ರಾಜ್ಯ ಸರಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ವಿಶೇಷ ಕಾರ್ಯತಂತ್ರ ರೂಪಿಸಬೇಕು ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಆಗ್ರಹಿಸಿದ್ದಾರೆ.
ದಶಕಗಳಿಂದಲೂ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲ ಇದೆ ಎಂದು ಆರೋಪಿಸಲಾಗುತ್ತಿತ್ತು. ಇದೀಗ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲಕ್ಕೂ ಉಡುಪಿಯ ನಂಟಿದೆ ಎಂಬುದು ದುರಂತ.
ಬುದ್ದಿವಂತರ ಜಿಲ್ಲೆಯಲ್ಲಿ ಅನ್ಯ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆಂದು ಆಗಮಿಸಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇಂಥ ಜಿಲ್ಲೆಗೆ ಕಪ್ಪುಚುಕ್ಕಿಯಂತೆ ಡ್ರಗ್ಸ್ ಜಾಲ ಹಬ್ಬಿರುವುದು ಕಳಂಕಿತ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾಲ್ ಸೆಂಟರ್'ಗಳ ಮಾಹಿತಿ ಪಡೆದು ಸಮಗ್ರ ತನಿಖೆ ನಡೆಸುವಂತೆ ತಿಂಗಳೆ ಆಗ್ರಹಿಸಿದ್ದಾರೆ.