
ವಿಮಾ ಅಧಿಕಾರಿ ಪುರಂದರ ಕೋಡಿಬೆಂಗ್ರೆಗೆ ವಿದಾಯ
Monday, July 7, 2025
ಲೋಕಬಂಧು ನ್ಯೂಸ್, ಉಡುಪಿ
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದಲ್ಲಿ ಮೂರು ದಶಕಗಳಿಗಿಂತಲೂ ಅಧಿಕ ವರ್ಷ ಸೇವೆ ಸಲ್ಲಿಸಿ, ನಿವೃತ್ತರಾದ ವಿಭಾಗೀಯ ಪ್ರಬಂಧಕ (ವಿಕ್ರಯ) ಪುರಂದರ ಕೋಡಿಬೆಂಗ್ರೆ ಅವರನ್ನು ಈಚೆಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಜಿ.ಎನ್. ಭಟ್, ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್ ಮೊದಲಾದವರಿದ್ದರು.
ಮ್ಯಾನೇಜರ್ (ಸೇಲ್ಸ್) ದುರ್ಗಾರಾಮ್ ಶೆಣೈ ನಿರೂಪಿಸಿದರು.
ಉತ್ತಮ ವಾಗ್ಮಿಯಾಗಿರುವ ಪುರಂದರ ಕೋಡಿಬೆಂಗ್ರೆ ಕನ್ನಡ ಹಾಗೂ ತುಳು ಕಥೆ, ಕಾದಂಬರಿ ಹಾಗೂ ಕವನ ಸಂಕಲನ ಪ್ರಕಟಿಸಿದ್ದಾರೆ. ಅವರ ತುಳು ಕಾದಂಬರಿಗೆ ಅಕಾಡೆಮಿ ಪ್ರಶಸ್ತಿ ಬಂದಿದೆ.
ಅವರ ಅನೇಕ ಕಥೆ ಹಾಗೂ ಬರಹಗಳು ಅನೇಕ ಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ನಾಟಕ ಹಾಗೂ ಚಿಂತನ ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ.
ಮಾರ್ಕ್ಯೂಸ್'ನ ಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.