ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಭಾನುವಾರ ಹರಿವಾಣ ನರ್ತನ ಸೇವೆ ಮಾಡಿದರು.
ಆಷಾಢ ಏಕಾದಶಿಯಿಂದ ತೊಡಗಿ ಕಾರ್ತೀಕ ಏಕಾದಶಿ ವರೆಗೆ ಬರುವ ಪ್ರತೀ ಏಕಾದಶಿಗಳಂದು ರಾತ್ರಿ ಮಹಾಪೂಜೆ ಬಳಿಕ ಶ್ರೀಕೃಷ್ಣನ ನಿರ್ಮಾಲ್ಯವನ್ನು ಹರಿವಾಣದಲ್ಲಿಟ್ಟು ಅದನ್ನು ಶ್ರೀಪಾದರು ತಲೆಯ ಮೇಲಿಟ್ಟುಕೊಂಡು `ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು...' ಎಂಬ ದಾಸರ ಹಾಡಿಗೆ ದೇವರೆದುರು ಹೆಜ್ಜೆ ಹಾಕುವುದು ಸಂಪ್ರದಾಯ.