-->
ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

ಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ

ಲೋಕಬಂಧು ನ್ಯೂಸ್, ಉಡುಪಿ
ಪ್ರಥಮೈಕಾದಶಿ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಭಾನುವಾರ ತಪ್ತ ಮುದ್ರಾಧಾರಣೆ ನಡೆಯಿತು.
ವೈಷ್ಣವ ಸಂಪ್ರದಾಯದಲ್ಲಿ ವಿಷ್ಣುಭಕ್ತಿಯ ಧ್ಯೋತಕವಾಗಿ ಆಷಾಢ ಏಕಾದಶಿಯಂದು ಮುದ್ರಾಧಾರಣೆ ನಡೆಸಲಾಗುತ್ತದೆ. ರೋಗನಿರೋಧಕ ಶಕ್ತಿ ವರ್ಧನೆಗೆ ಮುದ್ರಾಧಾರಣೆ ಪೂರಕ ಎಂಬ ನಂಬಿಕೆ ಇದೆ.
ಸುದರ್ಶನ ಹೋಮ ನಡೆಸಿ ಹೋಮಾಗ್ನಿಯಲ್ಲಿ ವಿಷ್ಣು ಲಾಂಛನವಾದ ಲೋಹದ ಶಂಖ, ಚಕ್ರ, ಗದೆ, ಪದ್ಮ ಇತ್ಯಾದಿಗಳನ್ನು ಪುರುಷರ ಎದೆ ಮತ್ತು ತೋಳುಗಳಿಗೆ ಹಾಗೂ ಮಹಿಳೆಯರ ತೋಳುಗಳಿಗೆ ಹಾಕಲಾಗುತ್ತದೆ.
ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೊದಲಿಗೆ ಸ್ವತಃ ಮುದ್ರಾಧಾರಣೆ ಮಾಡಿಕೊಂಡು ಬಳಿಕ ಶಿಷ್ಯ, ಕಿರಿಯ ಯತಿ ಶೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.
ಬಳಿಕ ಉಭಯ ಶ್ರೀಪಾದರು ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು.

Ads on article

Advertise in articles 1

advertising articles 2

Advertise under the article