12ನೇ ಶತಮಾನದ ಶಿವಶರಣ ಹಾಗೂ ವಚನಕಾರ
ಅಂಬಿಗರ ಚೌಡಯ್ಯ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ವ್ಯಕ್ತಿತ್ವವನ್ನು ಹೊಂದಿದಾತ.
ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಅವನ ವಿಶೇಷತೆ.
ಬಸವಣ್ಣನ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯಲ್ಲಿ ಸೇರಿಕೊಂಡವ.
ತನ್ನ ವೃತ್ತಿಯಿಂದ ಅನ್ವರ್ಥನಾಮ ಪಡೆದ ಅಂಬಿಗರ ಚೌಡಯ್ಯ ತನ್ನ ವಚನಗಳ ಅಂಕಿತ ನಾಮವನ್ನಾಗಿಸಿದ ಕಾಯಕ ಜೀವಿ.
-✍️
ಸುಬ್ರಹ್ಮಣ್ಯ ಬಾಸ್ರಿ, ಉಡುಪಿ