
PM Modi: ವಿಶ್ವಕಪ್: ಪ್ರಧಾನಿ ಮೋದಿ ಹಾರೈಕೆ
Sunday, November 19, 2023
ನವದೆಹಲಿ, ನ.19 (ಲೋಕಬಂಧು ವಾರ್ತೆ): ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತ ಆಸಿಸ್ ತಂಡದ ನಾಯಕರು ಗುಜರಾತ್ ನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುವ ಸಂದರ್ಭದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ 'ಆಲ್ ದಿ ಬೆಸ್ಟ್ ಟೀಂ ಇಂಡಿಯಾ, ನಿಮ್ಮ ಗೆಲುವಿಗಾಗಿ 140 ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಉತ್ತಮ ಆಟ ಆಡಿ ಹಾಗೂ ಕ್ರೀಡಾ ಮನೋಭಾವ ಎತ್ತಿ ಹಿಡಿಯಿರಿ' ಎಂದು ಪೋಸ್ಟ್ ಮಾಡಿದ್ದಾರೆ.