ಮನೆ ಕುಸಿತ: ಶಾಸಕ ಭೇಟಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಭಾರೀ ಮಳೆಗೆ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಕಟ್ಟೆಗುಡ್ಡೆಯಲ್ಲಿ ಶಾರದಾ ಎಂಬವರ ಮನೆ ಕುಸಿದು ಸಂಪೂರ್ಣ ಹಾನಿಗೀಡಾಗಿದ್ದು, ಶಾಸಕ ಯಶ್ ಪಾಲ್ ಸುವರ್ಣ ಗುರುವಾರ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಸಾಲ್ಯಾನ್ ಮತ್ತು ರಾಘವೇಂದ್ರ ಕುತ್ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರಬಾಬು, ಪಕ್ಷದ ಪ್ರಮುಖರಾದ ಜಯಕರ ಸನಿಲ್, ಗಣೇಶ್ ಕುಮಾರ್ ಸಂಪಿಗೆ ನಗರ ಮತ್ತು ರಾಕೇಶ್, ಕಡೆಕಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಮೊದಲಾದವರಿದ್ದರು.