ದಾಖಲೆಯ 'ಅನುಕೂಲಕರ' ಬಜೆಟ್ ಮಂಡನೆ
Tuesday, July 23, 2024
ದಾಖಲೆಯ 'ಅನುಕೂಲಕರ' ಬಜೆಟ್ ಮಂಡನೆ
ಲೋಕಬಂಧುನ್ಯೂಸ್ ಡೆಸ್ಕ್, ನವದೆಹಲಿ
ಬಡವರು, ಮಹಿಳೆಯರು, ಯುವಜನತೆ ಮತ್ತು ರೈತರು ಇವು ಮುಖ್ಯ ಆಧಾರ ಸ್ತಂಭಗಳಾಗಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ದಿ. ಮೊರಾಜಿ ದೇಸಾಯಿ ಅವರ ಸತತ ಆರು ಬಜೆಟ್‌ಗಳ ದಾಖಲೆಯ ನಂತರ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೆಯ ಬಜೆಟ್ ಮಂಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ವಿಕಸಿತ ಭಾರತ ಬಜೆಟ್ 2024- 25ರಲ್ಲಿ ಅನ್ನದಾತ, ಬಡವ ಹಾಗೂ ಮಹಿಳೆ ಸೇರಿದಂತೆ 9 ಕ್ಷೇತ್ರಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.
ಕೌಶಲ್ಯ, ಮಧ್ಯಮ ವರ್ಗ, ನಿರುದ್ಯೋಗ, ಎಮ್ಎಸ್ಎಮ್ಇ ಕ್ಷೇತ್ರಗಳಿಗೂ ಒತ್ತುನೀಡಲಾಗಿದೆ.
‘ವಿಕಸಿತ್ ಭಾರತ್’ಗಾಗಿ 9 ಆದ್ಯತೆಗಳ ಮೇಲೆ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಅವುಗಳನ್ನು ಕೃಷಿ, ಉದ್ಯೋಗ ಮತ್ತು ಕೌಶಲ್ಯ, ಉತ್ಪಾದನೆ ಮತ್ತು ಸೇವೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿ ಸ್ಥಾಪಕತ್ವ ಎಂದು ಪಟ್ಟಿ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೃಷಿ, ಉದ್ಯೋಗ ಮತ್ತು ಕೌಶಲ್ಯ,ಸುಧಾರಿತ ಮಾನವ ಸಂಪನ್ಮೂಲಗಳು, ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ, ಭದ್ರತೆ, ಮೂಲ ಸೌಕರ್ಯ, ನಾವೀನ್ಯತೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿ ಸ್ಥಾಪಕತ್ವವನ್ನು ಪಟ್ಟಿಮಾಡುವ ‘ವಿಕಸಿತ್ ಭಾರತ್’ಗಾಗಿ 9 ಆದ್ಯತೆಗಳ ಮೇಲೆ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.
'ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ, ಭಾರತದ ಆರ್ಥಿಕ ಬೆಳವಣಿಗೆ ಉಜ್ವಲವಾಗಿದ್ದು, ಬೆಳವಣಿಗೆ ಏರುಗತಿಯಲ್ಲಿ ಮುಂದುವರಿಯುತ್ತದೆ ಹಾಗೂ ಮುಂದಿನ ವರ್ಷಗಳಲ್ಲಿಯೂ ಈ ಬೆಳವಣಿಗೆ ದರ ಹೀಗೆಯೇ ಮುಂದುವರಿಯಲಿದೆ ಎಂದರು.
ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಕೇಂದ್ರ ಸರ್ಕಾರ ಒಂದು ತಿಂಗಳ ಸಂಬಳವಾಗಿ 15 ಸಾವಿರ ರೂ. ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಆರಂಭದಲ್ಲೇ ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಒಂದು ತಿಂಗಳ ವೇತನ ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಅಂದರೆ, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ಕೇಂದ್ರ ಸರ್ಕಾರ ಒಂದು ತಿಂಗಳ ಸಂಬಳವಾಗಿ 15 ಸಾವಿರ ರೂ. ನೀಡುತ್ತದೆ. ಅದರಿಂದ 2.1 ಕೋಟಿ ಯುವಜನತೆಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಇಪಿಎಫ್‌ಒಗೆ ನೋಂದಣಿ ಮಾಡಿಕೊಳ್ಳುತ್ತಲೇ ಒಂದು ತಿಂಗಳ ಸಂಬಳವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.