.jpg)
ಕೊರಗ ಸಮುದಾಯದ ಬೇಡಿಕೆ ಈಡೇರಿಕೆ ಆಗ್ರಹಿಸಿ ವಾಹನ ಜಾಥಾ
Thursday, July 18, 2024
ಕೊರಗ ಸಮುದಾಯದ ಬೇಡಿಕೆ ಈಡೇರಿಕೆ ಆಗ್ರಹಿಸಿ ವಾಹನ ಜಾಥಾ
ಲೋಕಬಂಧುನ್ಯೂಸ್ ಡೆಸ್ಕ್, ಕಾಪು
ಕೊರಗ ಸಮುದಾಯದ ಯುವಜನತೆಗೆ ಸರ್ಕಾರಿ ಉದ್ಯೋಗ ಭದ್ರತೆ ಹಾಗೂ ಭೂಮಿ ಹಕ್ಕುಪತ್ರ ಮಂಜೂರಾತಿ ಇತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ನೇತೃತ್ವದಲ್ಲಿ ಕಾಪುನಿಂದ ಬ್ರಹ್ಮಾವರ ವರೆಗೆ ಗುರುವಾರ ವಾಹನ ಜಾಥಾ ನಡೆಯಿತು.
ವಿಪರೀತ ಮಳೆಯ ನಡುವೆಯೂ ಸಮುದಾಯದ ಯುವಜನತೆ, ಮುಖಂಡರು ಭಾಗವಹಿಸಿದ್ದರು.
ಜಾಥಾ ಕಟಪಾಡಿ, ಉಡುಪಿ ಮಾರ್ಗವಾಗಿ ಬ್ರಹ್ಮಾವರ ಹಂದಾಡಿ ಗ್ರಾಮ ಪಂಚಾಯತ್ ಎದುರು ಸಮಾಪನಗೊಂಡಿತು.
ಜಾಥಾದ ಉದ್ದೇಶವನ್ನು ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ವಿವರಿಸಿದರು.
ಕುಂದಾಪುರ ಪುರಸಭೆ ಸದಸ್ಯ ವಿ. ಪ್ರಭಾಕರ ಸಮುದಾಯದ ಯುವಜನರಿಗೆ ಉದ್ಯೋಗ, ಹಾಗೂ ಕೃಷಿ ಭೂಮಿ ಹಕ್ಕುಪತ್ರ ವಿತರಣೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಖಜಾಂಚಿ ದಿವಾಕರ ಕಳ್ತೂರು, ಕುಂದಾಪುರ ತಾಲೂಕು ಅಧ್ಯಕ್ಷ ಶೇಖರ್, ಸಮುದಾಯದ ಮುಖಂಡರಾದ ಬೊಗ್ರ ಕೊಕ್ಕರ್ಣೆ, ಚಂದ್ರ ಕಳ್ತೂರು, ನಾಗರಾಜ ಕುಂದಾಪುರ, ಕಾರ್ಯಕರ್ತರಾದ ಶಶಿಕಲಾ, ರೋಹಿತ್, ಸುಪ್ರಿಯಾ, ನರಸಿಂಹ ಇದ್ದರು.
ಒಕ್ಕೂಟದ ಸಂಯೋಜಕ ಕೆ. ಪುತ್ರ ಹೆಬ್ರಿ ಸ್ವಾಗತಿಸಿ, ದೀಪಿಕಾ ವಂದಿಸಿದರು.