ವಕ್ಫ್ ವಿವಾದ: ನ.7ರಂದು ರಾಜ್ಯಕ್ಕೆ ಜೆಪಿಸಿ ಅಧ್ಯಕ್ಷ ಭೇಟಿ
Wednesday, November 6, 2024
ಲೋಕಬಂಧು ನ್ಯೂಸ್, ಬೆಂಗಳೂರು
ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನ.7ರಂದು ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದ ಸಮಿತಿ ಅಧ್ಯಕ್ಷ ಹಾಗೂ ಸಂಸದ ಆಗಿರುವ ಜಗದಂಬಿಕಾ ಪಾಲ್ ವಕ್ಫ್‌ನಿಂದ ಆಗುತ್ತಿರುವ ಅನ್ಯಾಯವನ್ನು ಖುದ್ದಾಗಿ ವಿಚಾರಿಸಲು ನ. 7ರಂದು ಆಗಮಿಸುತ್ತಿದ್ದಾರೆ.
ವಕ್ಫ್ ಕಾಯ್ದೆ ವಿರುದ್ಧ ನಾವು ಈಗಾಗಲೇ ಅಹರ್ನಿಶಿ ಹೋರಾಟ ಪ್ರಾರಂಭಿಸಿದ್ದು ಜೆ.ಪಿ.ಸಿ. ಅಧ್ಯಕ್ಷರಿಗೆ ಹಾಗೂ ಸಮಿತಿಗೆ ಪೂರ್ಣ ವಿವರ ಕೊಡಲಿದ್ದೇವೆ.
ಜೆ.ಪಿ.ಸಿಯ ಅಂತಿಮ ವರದಿಯಲ್ಲಿ ರೈತರಿಗಾಗಲಿ, ಸ್ಮಾರಕಗಳಿಗಾಗಲಿ, ಸರ್ಕಾರಿ ಕಚೇರಿಗಳಿಗಾಗಲಿ, ಭೂ ಮಾಲೀಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಖುದ್ದು ಭೇಟಿ ಮಾಡಿ ಮನವಿ ಮಾಡುವುದಾಗಿ ಯತ್ನಾ್ ಎಂದಿದ್ದಾರೆ.