ಎಡನೀರು ಶ್ರೀ ದಾಳಿಗೆ ಖಂಡನೆ
Tuesday, November 5, 2024
ಲೋಕಬಂಧು ನ್ಯೂಸ್, ಉಡುಪಿ
ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದರ ಕಾರಿನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸುವುದಾಗಿ ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.ಶ್ರೀಗಳ ಕಾರನ್ನು ಹಿಂಬಾಳಿಸಿ ಕಾಸರಗೋಡು ಮಾರ್ಗ ಮಧ್ಯೆ ಕಾರಿಗೆ ದೊಣ್ಣೆಯಿಂದ ಹೊಡೆದು ತೀವ್ರವಾಗಿ ಹಾನಿ ಮಾಡಿ ಶ್ರೀಗಳಿಗೆ ಅವಾಚ್ಯವಾಗಿ ನಿಂದಿಸಿರುವ ಬಗ್ಗೆ ವರದಿಯಾಗಿದೆ.
ಎಡನೀರು ಸಂಸ್ಥಾನದ ಶ್ರೀಗಳ ಮೇಲಾಗಿರುವ ದಾಳಿ ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ.
ಕೂಡಲೇ ಪ್ರಕರಣ ದಾಖಲಿಸಿ ಅಪರಾಧಿಗಳನ್ನು ಬಂಧಿಸಿ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಭಟ್ ಆಗ್ರಹಿಸಿದ್ದಾರೆ.