ಮಥುರಾದಲ್ಲಿ ಶೀರೂರುಶ್ರೀ ಗೋಪೂಜೆ
Monday, November 4, 2024
ಲೋಕಬಂಧು ನ್ಯೂಸ್, ಉಡುಪಿ
ಭಾವಿ ಪರ್ಯಾಯ ಶೀರೂರು ಪೀಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ದೀಪಾವಳಿ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಸ್ಥಾನವಾದ ಮಥುರಾದಲ್ಲಿ ಗೋಪೂಜೆ ನೆರವೇರಿಸಿದರು.ಪರ್ಯಾಯ ಪೂರ್ವ ಸಂಚಾರ ನಿಮಿತ್ತ ಮಥುರಾ ಬೃಂದಾವನ ನಗರಕ್ಕೆ ಭೇಟಿ ನೀಡಿದ ಶ್ರೀಪಾದರು ಅಲ್ಲಿನ ಇಸ್ಕಾನ್ ಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.ಇಸ್ಕಾನ್ ಮುಖ್ಯಸ್ಥ ಶ್ರೀ ಚಂಚಲಕೃಷ್ಣದಾಸ ಅವರು ಶ್ರೀಪಾದರನ್ನು ಆದರಪೂರ್ವಕವಾಗಿ ಬರಮಾಡಿಕೊಂಡರು.
ಈರ್ವರೂ ಕೃಷ್ಣ ಚಿಂತನೆ ನಡೆಸಿದರು.
ಶ್ರೀಮಠದ ದಿವಾನ ವಿದ್ವಾನ್ ಉದಯಕುಮಾರ್ ಸರಳತ್ತಾಯ ಮೊದಲಾದವರಿದ್ದರು.
ಕೃಷ್ಣ ಉಂಡ ಸ್ಥಳ ದರ್ಶನ
ಶ್ರೀಕಷ್ಣ ಮತ್ತು ಬಲರಾಮ ಊಟ ಮಾಡಿದ ಕುರುಹುಗಳನ್ನು ಇಂದಿಗೂ ಕಾಣಬಹುದು.