
ಯೂಟ್ಯೂಬ್ ನಲ್ಲಿ ಸ್ಲೀಪ್ ಟೈಮರ್
Wednesday, November 6, 2024
ಲೋಕಬಂಧು ನ್ಯೂಸ್, ನವದೆಹಲಿ
ಯೂಟ್ಯೂಬ್ ಬಳಕೆದಾರರನ್ನು ಆಕರ್ಷಿಸಲು ಹೊಸ ಫೀಚರ್ ಪರಿಚಯಿಸಿದೆ. ಸ್ಲೀಪ್ ಟೈಮರ್, ರಿಸೈಜಬುಲ್ ಮಿನಿ ಪ್ಲೇಯರ್, ಇಷ್ಟದ ಪ್ಲೇ ಪಟ್ಟಿಯಂಥ ಅನೇಕ ಹೊಸ ವೈಶಿಷ್ಟ್ಯ ಹೊಂದಿದೆ.
ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುತ್ತಾ ನಿದ್ರೆಗೆ ಜಾರುವವರಿಗೆ ಹೊಸ ಫೀಚರ್‌ನಡಿ ಟೈಮರ್ ಸೆಟ್ ಮಾಡಿದರೆ ವಿಡಿಯೋವನ್ನು ಆಫ್ ಮಾಡಲು ಮರೆತರೂ ಆಟೋಮ್ಯಟಟಿಕ್ ಆಗಿ ಸ್ಟಾಪ್ ಆಗುತ್ತದೆ.
ಅದಲ್ಲದೆ ಪ್ಲೇ ಲಿಸ್ಟ್‌ಗಾಗಿ ಥಂಬ್‌ನೇಲ್‌ಗಳು, ಬಯಸಿದಂತೆ ಮಿನಿ-ಪ್ಲೇಯರ್, ಬ್ಯಾಡ್ಜ್ ಸೌಲಭ್ಯಗಳು ಹೀಗೆ ಎರಡು ಡಜನ್‌ಗಿಂತಲೂ ಹೆಚ್ಚು ಅಪ್‌ಡೇಟ್‌ಗಳನ್ನು ಯೂಟ್ಯೂಬ್ ಗ್ರಾಹಕರಿಗಾಗಿ ಆರಂಭಿಸಿದೆ.