-->
ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರಕಟ

ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಯಕ್ಷಗಾನ ಕಲಾರಂಗ ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ಕಲಾವಿದರಿಗೆ ಪ್ರತಿವರ್ಷ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ತೆಂಕು ಹಾಗೂ ಬಡಗುತಿಟ್ಟಿನ 22 ಮಂದಿ ಹಿರಿಯ ಯಕ್ಷಗಾನ ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ತಲಾ 20 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿದೆ.


ನ. 17ರಂದು ಯಕ್ಷಗಾನ‌ ಕಲಾರಂಗದ ನೂತನ‌ ಕಚೇರಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರು
ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಎಚ್.ನಾರಾಯಣ ಶೆಟ್ಟಿ ಉಡುಪಿ

ಪ್ರೊ. ಬಿ. ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ- ದೇವದಾಸ್ ರಾವ್ ಕೂಡ್ಲಿ
ನಿಟ್ಟೂರು ಸುಂದರ ಶೆಟ್ಟಿ- ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಸುರೇಶ್ ಕುಪ್ಪೆಪದವು
ಬಿ. ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಪುರಂದರ ಹೆಗಡೆ ನಾಗರಕೊಡಿಗೆ
ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ- ಗುಂಡಿಬೈಲು ನಾರಾಯಣ ಭಟ್
ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ- ಅಶೋಕ ಶೆಟ್ಟಿ ಸರಪಾಡಿ
ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ- ಕಿಗ್ಗ ಹಿರಿಯಣ್ಣ ಆಚಾರ್
ಮಾರ್ವೆ ರಾಮಕೃಷ್ಣ ಹೆಬ್ಬಾರ- ಮಾರ್ವೆ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ- ಥಂಡಿಮನೆ ಶ್ರೀಪಾದ ಭಟ್
ಶಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ- ಹೆರಿಯ ನಾಯ್ಕ ಮೊಗೆಬೆಟ್ಟು
ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ- ಕೆ. ಬಾಬು ಗೌಡ ತೋಡಿಕಾನ
ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ- ಹಾಲಾಡಿ ಕೃಷ್ಣ ಮರಕಾಲ
ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ- ಕೃಷ್ಣ ಪೂಜಾರಿ ಚಕ್ರಮೈದಾನ
ಮಲ್ಪೆ  ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ- ಹಾವಂಜೆ ಮಂಜುನಾಥ ರಾವ್
ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ- ಹೆರಂಜಾಲು ಗೋಪಾಲ ಗಾಣಿಗ
ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ- ರಾಧಾಕೃಷ್ಣ ನಾಕ್ ಚೇರ್ಕಾಡಿ
ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ- ಶೇಣಿ ಸುಬ್ರಹ್ಮಣ್ಯ ಭಟ್
ಕಡಂದೇಲು ಪುರುಷೋತ್ತಮ ಭಟ್ ಸ್ಮರಣಾರ್ಥ ಪ್ರಶಸ್ತಿ- ಸರಪಾಡಿ ಶಂಕರ ನಾರಾಯಣ ಕಾರಂತ
ಕಡತೋಕ ಕೃಷ್ಣ ಭಾಗವತ ಸ್ಮರಣಾರ್ಥ ಪ್ರಶಸ್ತಿ- ವೆಂಕಟ ರಾವ್ ಹೊಡಬಟ್ಟೆ
ಬಿ. ಪಿ. ಕರ್ಕೇರ ಸ್ಮರಣಾರ್ಥ ಪ್ರಶಸ್ತಿ- ರಮಾನಂದ ರಾವ್ ಕಟೀಲು
ಕೆ. ಮನೋಹರ ಸ್ಮರಣಾರ್ಥ ಪ್ರಶಸ್ತಿ- ನರಸಿಂಹ ಮಡಿವಾಳ ಹೆಗ್ಗುಂಜೆ
ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ- ಅಂಬಾಪ್ರಸಾದ ಪಾತಾಳ
 ಪ್ರಭಾವತಿ ವಿ. ಶೆಣೈ- ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ- ಗಜಾನನ ಸತ್ಯನಾರಾಯಣ ಭಂಡಾರಿ

Ads on article

Advertise in articles 1

advertising articles 2

Advertise under the article