
ಮಾ.2: ಅನಂತೇಶ್ವರ ರಥೋತ್ಸವ
Friday, February 28, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.27: ಇತಿಹಾಸ ಪ್ರಸಿದ್ಧ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಮಾರ್ಚ್ 2ರಂದು ವಾರ್ಷಿಕ ಮಹಾರಥೋತ್ಸವ ನಡೆಯಲಿದ್ದು, ಧ್ವಜಾರೋಹಣ ನೆರವೇರಿಸಲಾಯಿತು.
ರಥಬೀದಿಯಲ್ಲಿ ವಾದ್ಯ ಸುತ್ತಿನೊಂದಿಗೆ ಧಾರ್ಮಿಕ ವಿಧಿ ವಿಧಾನದೊಂದಿಗೆಧ್ವಜಾರೋಹಣ ನಡೆಸಿ ವಿಧ್ಯುಕ್ತವಾಗಿ ದೇವತೆಗಳಿಗೆ ರಥೋತ್ಸವಕ್ಕೆ ಆಹ್ವಾನ ನೀಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯ ಪ್ರಸನ್ನ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮಾ.2ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾರಥೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.