-->
'ಕಣ್ಣೀರ ಕಣಿವೆ' ಅನಾವರಣ

'ಕಣ್ಣೀರ ಕಣಿವೆ' ಅನಾವರಣ

ಲೋಕಬಂಧು ನ್ಯೂಸ್
ಉಡುಪಿ, ಫೆ.23: ಡಾ.ರಾಹುಲ್ ಮೆಗೆಝಿನ್ ಎಂಬ ಕಾಶ್ಮೀರಿ ಪಂಡಿತರು ಬರೆದ ಆ್ಯಂಡ್ ದಿ ವ್ಯಾಲಿ ರಿಮೈನ್ಡ್ ಸೈಲೆಂಟ್ ಪುಸ್ತಕವನ್ನು ಕನ್ನಡಕ್ಕೆ ಲೇಖಕ ಉದಯ ಕುಮಾರ್ ಹಬ್ಬು ಅನುವಾದಿಸಿದ್ದು, ಕನ್ನಡ ಅನುವಾದಿತ ಕೃತಿ ಕಣ್ಣೀರ ಕಣಿವೆ ಕಾಶ್ಮೀರಿ ನೆಲದಲ್ಲಿ ನೆಲೆ ಕಳೆದುಕೊಂಡವರ ಕಥೆ' ಕೃತಿಯನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ರಾಜಾಂಗಣದಲ್ಲಿ ಬಿಡುಗಡೆಗೊಳಿಸಿದರು.ಬಳಿಕ ಆಶೀರ್ವಚನ ನೀಡಿದ ಅವರು, ಲೇಖಕ ಡಾ.ರಾಹುಲ್ ಮೆಗೆಝಿನ್ ಸ್ವತಃ ಅನುಭವಿಸಿದ, ಪ್ರತ್ಯಕ್ಷ ಕಂಡಿರುವ, ಕಾಶ್ಮೀರಿ ಮುಸ್ಲಿಂ ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ಬರ್ಬರ ಜನಾಂಗೀಯ ಹತ್ಯೆಯನ್ನು, ಅತ್ಯಾಚಾರಗಳನ್ನು ಪುಸ್ತಕದಲ್ಲಿ ಚಿತ್ರಿಸಿದ್ದಾರೆ.


ಇಂಥ ಸಂಗತಿಗಳನ್ನು ಮಾಧ್ಯಮದವರು ಹೇಳುವುದು ತುಂಬಾ ಕಡಿಮೆ. ಈ ಕಾಶ್ಮೀರಿ ಪಂಡಿತರಿಗೆ ನ್ಯಾಯ ಸಿಗಬೇಕಿದೆ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದು ಕರೆ ಕೊಟ್ಟರು.


ವೇದಿಕೆಯಲ್ಲಿ ಕಿರಿಯ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು, ಅಯೋಧ್ಯ ಪ್ರಕಾಶನದ ರೋಹಿತ್ ಚಕ್ರತೀರ್ಥ, ಮೂಲಕೃತಿಯ ಲೇಖಕ ಡಾ.ರಾಹುಲ್ ಮೆಗೆಝಿನ್, ಅವರ ತಂದೆ ಡಾ ಮನಮೋಹನ್ ಕಿಶನ್ ಮೆಗೆಝಿನ್ ಉಪಸ್ಥಿತರಿದ್ದರು.


ಅನುವಾದಕ ಉದಯ ಕುಮಾರ ಹಬ್ಬು  ಪುಸ್ತಕ ಪರಿಚಯಿಸಿದರು. ಡಾ.ಚಿನ್ಮಯಿ ಪೆಡ್ಡಿಸೆಟ್ಟಿ ಪ್ರಾಥರ್ಿಸಿದರು. ಡಾ.ಕುಶಾಂತ ಪಿ ಸ್ವಾಗತಿಸಿ, ಡಾ. ಮನೀಷ್ ಆರ್.ಶೆಟ್ಟಿ ವಂದಿಸಿದರು. ಮೇಘನಾ ಭಟ್ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article