ಏ.19: ಯಕ್ಷಧ್ರುವಪಟ್ಲಾಶ್ರಯ ಭೂಮಿ ಪೂಜೆ
Saturday, March 29, 2025
ಲೋಕಬಂಧು ನ್ಯೂಸ್
ಉಡುಪಿ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮಹತ್ವಾಕಾಂಕ್ಷೆಯ ಗೃಹ ಸಮುಚ್ಛಯಕ್ಕೆ ಏಪ್ರಿಲ್ 19ರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಪ್ರೊ.ಎಂ.ಎಲ್. ಸಾಮಗ ಅವರು ಕೊಡವೂರಿನ ಲಕ್ಷ್ಮೀನಗರದಲ್ಲಿ ದಾನವಾಗಿ ನೀಡಿದ 50 ಸೆಂಟ್ಸ್ ಸ್ಥಳದಲ್ಲಿ ಯಕ್ಷಗಾನ ಕಲಾವಿದರಿಗೋಸ್ಕರ `ಯಕ್ಷಧ್ರುವ ಪಟ್ಲಾಶ್ರಯ' ನಿರ್ಮಾಣಗೊಳ್ಳಲಿದೆ ಎಂದು ಟ್ರಸ್ಟ್ ಸ್ಥಾಪಕ ಅಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಉಡುಪಿ ಘಟಕದ ಪ್ರಮುಖರಾದ ಸುಧಾಕರ ಆಚಾರ್ಯ ತಿಳಿಸಿದ್ದಾರೆ.