ಏ.2: ಮೊಲ್ಟೊ ಕೇರ್ ಕಾರ್ಯಾರಂಭ
Monday, March 31, 2025
ಲೋಕಬಂಧು ನ್ಯೂಸ್
ಉಡುಪಿ: ದುಬೈ ಮೂಲದ ಪ್ರೊಪರ್ಟಿ ಸರ್ವೀಸ್ ಕಂಪೆನಿ ಮೊಲ್ಟೊ ಕೇರ್ ಉಡುಪಿಗೆ ಕಾಲಿಟ್ಟಿದೆ. ಭಾರತದಲ್ಲಿ ಪ್ರಥಮವಾಗಿ ಉಡುಪಿಯಲ್ಲಿ ಏಪ್ರಿಲ್ 2ರಂದು ಕುಂಜಿಬೆಟ್ಟುನಲ್ಲಿ ಕಾರ್ಯಾರಂಭಿಸಲಿದೆ.ಸಂಸ್ಥೆ ನಿರ್ದೇಶಕ ಕೃಷ್ಣರಾಜ ತಂತ್ರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂಸ್ಥೆ ಆಸ್ತಿ ಮತ್ತು ಮನೆ, ಕಚೇರಿಯ ಎಲೆಕ್ಟ್ರಾನಿಕ್ಸ್ ವಸ್ತುಗಳ ನಿರ್ವಹಣೆ ನೋಡಿಕೊಳ್ಳುತ್ತದೆ. ಏರ್ ಕಂಡೀಷನಿಂಗ್, ಇಲೆಕ್ಟ್ರಿಕಲ್, ಪಬ್ಲಿಂಗ್, ಮರ ಕೆಲಸ, ಗಾರೆ ಕೆಲಸ ಇತ್ಯಾದಿ ಮನೆಯೊಳಗಿನ ಸೇವೆಗಳನ್ನು ಜನರಿಗೆ ನೀಡುತ್ತದೆ. ಅಲ್ಲದೇ ಆಸ್ತಿ ಬಾಡಿಗೆ, ಮನೆಯ ಸ್ವಚ್ಛತೆ ಇತ್ಯಾದಿಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ನಿಗದಿತ ದರದಲ್ಲಿ ನಿರ್ವಹಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟೆಕ್ ಸಪೋರ್ಟ್ ವಿಜೇತಾ ತಂತ್ರಿ, ನಿರ್ವಹಣೆ ಇಂಜಿನಿಯರ್ ಮುರುಗನ್, ಎಸಿ ಟೆಕ್ನೀಷಿಯನ್ ರಂಜಿತ್ ಉಪಸ್ಥಿತರಿದ್ದರು.