ಬಿಜೆಪಿಯಿಂದ 6 ವರ್ಷ ಕಾಲ ಯತ್ನಾಳ್ ಉಚ್ಚಾಟನೆ
Wednesday, March 26, 2025
ಲೋಕಬಂಧು ನ್ಯೂಸ್
ನವದೆಹಲಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನವಾಗಿ ಯತ್ನಾಳ್ ಮಾತನಾಡಿದ್ದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಕೂಡಾ ಕೊಡಲಾಗಿತ್ತು. ಅದಕ್ಕೆ ಯತ್ನಾಳ್ ಉತ್ತರವನ್ನೂ ಕೊಟ್ಟಿದ್ದರು.
ಆದರೆ, ಇದೀಗ ದೆಹಲಿ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ್ ಅವರನ್ನು 6 ವರ್ಷ ಕಾಲ ಉಚ್ಚಾಟನೆ ಮಾಡಲಾಗಿದೆ.