ಪಕ್ಷದ ತೀರ್ಮಾನ ಒಪ್ಪಲೇಬೇಕು
Thursday, March 27, 2025
ಲೋಕಬಂಧು ನ್ಯೂಸ್
ಉಡುಪಿ: ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಸಮರ್ಥಿಸಿಕೊಂಡಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಬಿಜೆಪಿಗೆ ಶಿಸ್ತು ಇದೆ. ಅದಕ್ಕೊಂದು ಚೌಕಟ್ಟು ಇದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಸಿದ್ಧಾಂತ ನಮ್ಮದು.
ಯತ್ನಾಳ್ ಕಳೆದ ಸುಮಾರು ಒಂದು ವರ್ಷದಿಂದ ಬಿಜೆಪಿ ಹಾಗೂ ಪಕ್ಷ ನಾಯಕರ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದರು. ಅವರಿಗೆ ಪಕ್ಷ ಪ್ರಮುಖರು ಎಚ್ಚರಿಕೆ ನೀಡಿದ್ದರೂ ಸುಧಾರಿಸಿಕೊಳ್ಳದ ಅವರ ವಿರುದ್ಧ ಪಕ್ಷದ ಹೈಕಮಾಂಡ್ 6 ವರ್ಷ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ.
ಯತ್ನಾಳ್ ಹಿರಿಯರು. ಅವರಿಗೆ ತಮ್ಮ ತಪ್ಪಿನ ಅರಿವಾಗಿರಬಹುದು. ಪಕ್ಷದ ಸಿದ್ಧಾಂತ, ತತ್ವವನ್ನು ಮೀರಿ ನಡೆದಿರುವುದು ತರವಲ್ಲ ಎಂದು ಯಶಪಾಲ್ ತಿಳಿಸಿದರು.