
ಡಿಕೆಶಿ ಸಿಎಂ ಗ್ಯಾರಂಟಿ
Monday, March 3, 2025
ಲೋಕಬಂಧು ನ್ಯೂಸ್
ಕಾರ್ಕಳ: ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕೆ ತಯಾರಿಯೂ ಆರಂಭವಾಗಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾಂಗ್ರೆಸ್ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕನಾಗಿರುವಾಗಲೇ ಡಿಕೆಶಿ ಅವರಲ್ಲಿದ್ದ ನಾಯಕತ್ವ ಗುಣ, ಪಕ್ಷವನ್ನು ಮುನ್ನಡೆಸುವ ಶಕ್ತಿ ಗಮನಿಸಿದ್ದೆ. ಹಾಗಾಗಿಯೇ ಅವರಿಗೆ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ.
ಅವರು ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಅದು ಅವರಿಗೆ ಸಿಕ್ಕಿರುವ ವರ. ಅದಕ್ಕೆ ತಯಾರಿಯೂ ಆರಂಭಗೊಂಡಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ವೀರಪ್ಪ ಮೊಯ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.