
ಗ್ಲಾಕೋಮಾ ಕಣ್ಣಿನ ಉಚಿತ ತಪಾಸಣೆ
Friday, March 14, 2025
ಲೋಕಬಂಧು ನ್ಯೂಸ್
ಉಡುಪಿ: ಗ್ಲಾಕೋಮಾ ಕಣ್ಣಿನ ಕಾಯಿಲೆ ಯಾವುದೇ ಮುನ್ಸೂಚನೆ ಇಲ್ಲದೇ ಮನುಷ್ಯನನ್ನು ದೃಷ್ಟಿಹೀನನನ್ನಾಗಿ ಮಾಡುವ ಕಾಯಿಲೆ. ಕಣ್ಣಿನ ಒಳಗಿನ ಒತ್ತಡದಿಂದ, ಆಪ್ಟಿಕ್ ನರದ ಮೇಲೆ ಉಂಟಾಗುವ ಹಾನಿಯಿಂದ ಈ ಕಾಯಿಲೆ ನಿಧಾನವಾಗಿ ಉಲ್ಬಣಗೊಳ್ಳುತ್ತದೆ.
ವಿಶ್ವಾದ್ಯಂತ ಗ್ಲಾಕೋಮಾ ಕಣ್ಣಿನ ತೊಂದರೆಯಿಂದ ಕುರುಡರಾಗುತ್ತಿರುವವರ ಸಂಖ್ಯೆ ವೃದ್ಧಿಸುತ್ತಿದ್ದು, ಗ್ಲಾಕೋಮಾ ಕಣ್ಣಿನ ರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವಾದ್ಯಂತ ಗ್ಲಾಕೋಮಾ ಸಪ್ತಾಹವನ್ನು ಮಾಚರ್್ಯ ತಿಂಗಳಲ್ಲಿ ಆಚರಿಸಲಾಗುತ್ತಿದೆ.
ಆ ಪ್ರಯುಕ್ತ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಮಾರ್ಚ್ 15ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ಗ್ಲಾಕೋಮಾ ತಪಾಸಣೆ ನಡೆಸಲಾಗುವುದು.
ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.