.jpg)
ಕಾಪು ಭೇಟಿ ನನ್ನ ಸೌಭಾಗ್ಯ
Sunday, March 2, 2025
ಲೋಕಬಂಧು ನ್ಯೂಸ್
ಕಾಪು: ಎಲ್ಲರನ್ನೂ ಕಾಪಾಡುವ ಮಾರಮ್ಮನ ಪವಿತ್ರವಾದ ಕ್ಷೇತ್ರ ಕಾಪು. ಇಲ್ಲಿಗೆ ಬಂದಿರುವುದು ನನ್ನ ದೊಡ್ಡ ಭಾಗ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕುಂಭಾಭಿಷೇಕ ಸಂಭ್ರಮದಲ್ಲಿರುವ ಕಾಪು ಶ್ರೀಹೊಸಮಾರಿಗುಡಿ ದೇವಳಕ್ಕೆ ಮಾರ್ಚ್ 2ರಂದು ಭೇಟಿ ನೀಡಿ ಮಾತನಾಡಿದರು.
ನಾನು ನೂರಾರು ದೇವಾಲಯ ನೋಡಿದ್ದೇನೆ. ಆದರೆ, ಈ ದೇವಾಲಯದ ಜೀರ್ಣೋದ್ಧಾರ ಮಾಡಿರುವ ರೀತಿ ಬೇರೆಲ್ಲೂ ನೋಡಿಲ್ಲ. ಶಿಲ್ಪಿಗಳು ಅದ್ಭುತವಾಗಿ ಕಲ್ಲು, ಮರದ ಕೆಲಸ ಮಾಡಿದ್ದಾರೆ.ಈ ದೇವಾಲಯ ಹಾಗೂ ಈ ದೇವಿಗೆ ಜಾತಿ ತಾರತಮ್ಯ ಇಲ್ಲ. ಮೇಲ್ಜಾತಿಯವರಿಂದ ಕೆಳಜಾತಿಯ ವರೆಗೂ ಎಲ್ಲರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಮಾನವ ಜಾತಿ ಮಾತ್ರ ಇದೆ. ನಾನು ನಂಬಿರುವ ನಮ್ಮ ಗುರುಗಳು ನನಗೆ `ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ' ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ತತ್ವ ಈ ದೇವಾಲಯದಲ್ಲಿ ಎದ್ದು ಕಾಣುತ್ತಿದೆ ಎಂದರು.
ಚಿನ್ನದ ಕಲಶ ಸೇವೆ ಕಾಣಿಕೆ
ಈ ಸಂದರ್ಭದಲ್ಲಿ ದೇವಾಲಯದ ಬ್ರಹ್ಮಕಲಶೋತ್ಸವ ಚಿನ್ನದ ಕಲಶ ಸೇವೆಗಾಗಿ 9 ಲಕ್ಷ 99 ಸಾವಿರದ 999 ರೂ. ಕಾಣಿಕೆ ಸಮರ್ಪಿಸಿದರು. ಪತ್ನಿಯೊಂದಿಗೆ ಇನ್ನೊಮ್ಮೆ ಭೇಟಿ ನೀಡುವುದಾಗಿ ತಿಳಿಸಿದರು.ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿ.ಪಂ. ಸಿಇಓ ಪ್ರತೀಕ್ ಬಾಯಲ್, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ, ಮನೋಹರ್ ಎಸ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಉದಯ್ ಸುಂದರ್ ಶೆಟ್ಟಿ, ಭಗವಾನ್ದಾಸ್ ಶೆಟ್ಟಿಗಾರ್, ಯೋಗೀಶ್ ವಿ. ಶೆಟ್ಟಿ ಮತ್ತು ರಮೇಶ್ ಹೆಗ್ಡೆ, ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ಮೊದಲಾದವರಿದ್ದರು.