ಗುಲಾಬ್ ಜಾಮುನ್ ಮಿಕ್ಸ್ ಬಿಡುಗಡೆ
Sunday, March 2, 2025
ಲೋಕಬಂಧು ನ್ಯೂಸ್
ಮಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಖಾದ್ಯ ತೈಲ ಬ್ರ್ಯಾಂಡ್ ಸನ್‌ಪ್ಯೂರ್, ತನ್ನ ಹೊಸ ರೆಡಿ-ಟು-ಮಿಕ್ಸ್ ಸಿಹಿತಿಂಡಿಗಳ ಶ್ರೇಣಿ ಪ್ರಾರಂಭಿಸುವ ಮೂಲಕ ತನ್ನ ಬಂಡವಾಳವನ್ನು ವಿಸ್ತರಿಸುತ್ತಿದೆ.ಖಾದ್ಯ ತೈಲ ಪರಂಪರೆಯ ಯಶಸ್ಸು ಹಾಗೂ ಮಸಾಲೆಗಳು ಮತ್ತು ಮಿಶ್ರ ಮಸಾಲೆಗಳ ಮಾರುಕಟ್ಟೆಯಲ್ಲಿ ಇತ್ತೀಚಿನ ಸಾಹಸವನ್ನು ಆಧರಿಸಿ, ಸನ್‌ಪ್ಯೂರ್ ಇದೀಗ ತನ್ನ ಗುಲಾಬ್ ಜಾಮುನ್ ಮಿಶ್ರಣವನ್ನು ಪರಿಚಯಿಸುತ್ತಿದೆ.
ಹೊಸ ಉತ್ಪನ್ನ ಶ್ರೇಣಿ ಎರಡು ಅತ್ಯಾಕರ್ಷಕ ರೂಪಾಂತರ ಒಳಗೊಂಡಿದೆ. ಗುಲಾಬ್ ಜಾಮುನ್ ಇನ್‌ಸ್ಟಂಟ್ ಮಿಕ್ಸ್ ಮತ್ತು ಕೇಸರ್ ಬಾದಾಮ್ ಗುಲಾಬ್ ಜಾಮುನ್ ಇನ್‌ಸ್ಟಂಟ್ ಮಿಕ್ಸ್. ಇವೆರಡೂ ಯಾವುದೇ ಆಚರಣೆಗೆ ಸುಲಭವಾಗಿ ತಯಾರಿಸಬಹುದಾದ ಸಂರಕ್ಷಕ- ಮುಕ್ತ ಸಿಹಿ ತಿನಿಸುಗಳನ್ನು ನೀಡುತ್ತವೆ.
ಗುಲಾಬ್ ಜಾಮುನ್ ಇನ್‌ಸ್ಟಂಟ್ ಮಿಕ್ಸ್'ನ್ನು ಉತ್ತಮ ಗುಣಮಟ್ಟದ ಪದಾರ್ಥಗಳಿಂದ ತಯಾರಿಸಲಾಗಿದೆ ಮತ್ತು ಯಾವುದೇ ಕೃತಕ ಸುವಾಸನೆ, ಬಣ್ಣ ಅಥವಾ ಹೈಡ್ರೋಜನೀಕರಿಸಿದ ಕೊಬ್ಬು ಹೊಂದಿಲ್ಲ.
ಅದೇ ರೀತಿ, ಕೇಸರ್ ಬಾದಾಮ್ ಗುಲಾಬ್ ಜಾಮುನ್ ರೂಪಾಂತರ ನೈಸರ್ಗಿಕ ಕೇಸರಿ ಮತ್ತು ಬಾದಾಮಿಗಳ ಉತ್ತಮತೆಯೊಂದಿಗೆ ಐಷಾರಾಮಿ ಸ್ಪರ್ಷ ತರುತ್ತದೆ. ಇದು ಹೆಚ್ಚುವರಿ ಸುವಾಸನೆ ಮತ್ತು ಶ್ರೀಮಂತಿಕೆಯನ್ನು ಒದಗಿಸುತ್ತದೆ.
ಎರಡೂ ಮಿಶ್ರಣಗಳನ್ನು ತ್ವರಿತ ತಯಾರಿಕೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಮನೆಗಳಲ್ಲಿ, ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸಹಕಾರಿ.
ಭಾರತದಲ್ಲಿ ಬೆಳೆಯುತ್ತಿರುವ 3,600 ಕೋಟಿಯ ರೆಡಿ-ಟು-ಮಿಕ್ಸ್ ಸಿಹಿತಿಂಡಿಗಳ ಮಾರುಕಟ್ಟೆಯಲ್ಲಿ ಗಮನಾರ್ಹ ಪಾಲು ವಶಪಡಿಸಿಕೊಳ್ಳುವ ಗುರಿಯನ್ನು ಬ್ರ್ಯಾಂಡ್ ಹೊಂದಿದೆ. 2025ರ ಅಂತ್ಯದ ವೇಳೆಗೆ ಸನ್‌ಪ್ಯೂರ್ ತನ್ನ ಗುಲಾಬ್ ಜಾಮೂನ್ ಮಿಕ್ಸ್'ನ್ನು ಭಾರತದಾದ್ಯಂತ 20 ಸಾವಿರ ಮಳಿಗೆಗಳಲ್ಲಿ ಲಭ್ಯವಾಗುವಂತೆ ಮಾಡಲು ಯೋಜಿಸಿದೆ.
ಆರಂಭಿಕ ಹಂತದಲ್ಲಿ ಕರ್ನಾಟಕವನ್ನು ಗುರಿಯಾಗಿರಿಸಿಕೊಂಡಿದ್ದು, ನಂತರ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಂಥ ಮಾರುಕಟ್ಟೆಗಳಿಗೆ ತನ್ನ ಹೆಜ್ಜೆ ವಿಸ್ತರಿಸಲಿದ್ದು, ಮೊದಲ ಎರಡು ವರ್ಷಗಳಲ್ಲಿ 10 ಶೇ. ಮಾರುಕಟ್ಟೆಯ ಗುರಿ ಹೊಂದಿದೆ.
ಈ ಕಾರ್ಯತಂತ್ರದ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸನ್‌ಪ್ಯೂರ್ ಮಾತೃ ಕಂಪನಿ ಎಂಕೆ ಅಗ್ರೋಟೆಕ್‌ನ ಮುಖ್ಯ ಕಾರ್ಯಾಚರಣಾಧಿಕಾರಿ ಶ್ರೀಧರ್ ವೈದ್ಯನಾಥನ್, 'ಭಾರತದಲ್ಲಿ ರೆಡಿ-ಟು-ಮಿಕ್ಸ್ ಆಹಾರ ವಿಭಾಗ ಬೆಳವಣಿಗೆಯನ್ನು ಅನುಭವಿಸುತ್ತಿದೆ, 2023ರಿಂದ 2028ರ ವರೆಗೆ ವಾರ್ಷಿಕ ಬೆಳವಣಿಗೆ ದರ ಸುಮಾರು 15 ಶೇ.ದಷ್ಟಿದೆ. ಈ ಮಾರುಕಟ್ಟೆಯಲ್ಲಿ ಗುಲಾಬ್ ಜಾಮೂನ್ ಮತ್ತು ಇತರ ಸಾಂಪ್ರದಾಯಿಕ ತಿನಿಸುಗಳಂಥ ರೆಡಿ-ಟು-ಮಿಕ್ಸ್ ಸಿಹಿತಿಂಡಿಗಳು ಪ್ರಸ್ತುತ ಒಟ್ಟು ವರ್ಗದ ಸುಮಾರು 20-25 ಶೇ.ರಷ್ಟಿದೆ ಎಂದರು.