-->
ಲಕ್ಷ್ಮೀದೇವಿಯ ಆರಾಧನೆಯಿಂದ ಭಗವದನುಗ್ರಹ

ಲಕ್ಷ್ಮೀದೇವಿಯ ಆರಾಧನೆಯಿಂದ ಭಗವದನುಗ್ರಹ

ಲೋಕಬಂಧು ನ್ಯೂಸ್
ಕಾಪು: ಲಕ್ಷ್ಮೀದೇವಿಯ ಆರಾಧನೆಯಿಂದ ಭಗವದನುಗ್ರಹ ದೊರೆಯುತ್ತದೆ. ಕಾಪುವಿನಲ್ಲಿ ಲಕ್ಷ್ಮೀಸ್ವರೂಪಿಣಿ ಶ್ರೀ ಮಾರಿಯಮ್ಮನಿಗೆ ವೈಭವದ ದೇವಾಲಯ ನಿರ್ಮಿಸಿರುವ ಧರ್ಮ ಕಾರ್ಯದಲ್ಲಿ ಕೈಜೋಡಿಸಿದವರೆಲ್ಲರಿಗೂ ಲಕ್ಷ್ಮೀ ಕೃಪೆ ಪ್ರಾಪ್ತಿಯಾಗುತ್ತದೆ ಎಂದು ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾರ್ಚ್ 1ರಂದು ಆಶೀರ್ವಚನ ನೀಡಿದರು.


ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷಭಾರತಿ ಸ್ವಾಮೀಜಿ ಮಾತನಾಡಿ, ನೂತನ ದೇಗುಲ ನೋಡಿದರೆ ದೇವಲೋಕದ ಸಕಲ ವೈಭವವೂ ಕಾಪು ಕಡಲ ತೀರಕ್ಕೆ ಬಂದಂತೆ ಭಾಸವಾಗುತ್ತದೆ ಎಂದರು.
ಗೌರಿಗದ್ದೆ ದತ್ತ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಆಶೀರ್ವಚನ ನೀಡಿ, ಕಾಪುವಿನ ಈ ದೇವಳ ವಿಶ್ವವ್ಯಾಪಿಯಾಗಿ ಬೆಳೆಯವುದು ಖಚಿತ. ಮುಂದೆ ಈ ಕ್ಷೇತ್ರ ಧಾರ್ಮಿಕತೆಗೆ ಸೀಮಿತಗೊಳ್ಳದೇ ಸಮಾಜದ ದುರ್ಬಲರಿಗೆ ನೆರವಾಗುವಂತಾಗಲಿ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಶುಭ ಹಾರೈಸಿದರು.


ದೇವಳದ ಅಭಿವೃದ್ಧಿ ಮುಂಬಯಿ ಸಮಿತಿ ಅಧ್ಯಕ್ಷ ಸುಧಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.


ದೇವಳದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕಾರ್ಯಾಧ್ಯಕ್ಷ ಶಶಿಧ‌ರ್ ಶೆಟ್ಟಿ ಮಲ್ಲಾ‌ರ್, ಓಮನ್ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಮಸ್ಕತ್, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕಾಪು ಬೀಡು ಅನಿಲ್ ಬಲ್ಲಾಳ್, ಉಪಾಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಪುಣೆ ಸಮಿತಿಯ ಸಂತೋಷ್ ಶೆಟ್ಟಿ ಇನ್ನ, ಹುಬ್ಬಳ್ಳಿ- ಧಾರವಾಡ ಸಮಿತಿ ಪದಾಧಿಕಾರಿಗಳಾದ ಮಹೇಶ್ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಲಂಡನ್ ಉದ್ಯಮಿ ಪೃಥ್ವಿರಾಜ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಶ್ವೇತಾ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.


ವಕೀಲ ಕೈರಂಗಳ ರಾಜೇಶ್ ರೈ ಅವರನ್ನು ಸನ್ಮಾನಿಸಲಾಯಿತು.


ಮಹಾದಾನಿಗಳಾದ ತುಂಗ ಸುಧಾಕರ್ ಹೆಗ್ಡೆ-ರಂಜನಿ ಹೆಗ್ಡೆ ದಂಪತಿ, ಮಸ್ಕತ್ ದಿವಾಕರ್ ಶೆಟ್ಟಿ-ಸುಧೀರ ದಂಪತಿ ಮತ್ತು ಬಿಲ್ಲವ ಸಮಾಜದ ಪರವಾಗಿ ರಾಜಶೇಖರ್ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು.


ದೇವಳದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ದಾಮೋದರ ಶರ್ಮ ಬಾರ್ಕೂರು ವಂದಿಸಿದರು. ವೇದಿಕೆ ಸಮಿತಿಯ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ಮಂದಿ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು.

Ads on article

Advertise in articles 1

advertising articles 2

Advertise under the article