-->
ಮಹಾರುದ್ರಯಾಗ ಸಂಪನ್ನ

ಮಹಾರುದ್ರಯಾಗ ಸಂಪನ್ನ

ಲೋಕಬಂಧು ನ್ಯೂಸ್
ಕಾಪು: ಕುಂಕುಮ ಶಿಲಾನಿರ್ಮಿತ ಗರ್ಭಗುಡಿಯಲ್ಲಿನ ಸ್ವರ್ಣ ಗದ್ದುಗೆಯಲ್ಲಿ ವಿರಾಜಮಾನಳಾಗಿರುವ ಶ್ರೀ ಮಾರಿಯಮ್ಮದೇವಿ ಹಾಗೂ ಶ್ರೀ ಉಚ್ಚಂಗಿ ಸನ್ನಿಧಿಯಲ್ಲಿ ಕುಂಭಾಭಿಷೇಕ ಹಿನ್ನೆಲೆಯಲ್ಲಿ ವಿವಿಧ ಹೋಮ ಹವನಾದಿಗಳು ಕೊರಂಗ್ರಪಾಡಿ ವೇದಮೂರ್ತಿ ಕೆ. ಜಿ.ರಾಘವೇಂದ್ರ ತಂತ್ರಿ ಮಾರ್ಗದರ್ಶನದಲ್ಲಿ  ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಸಹಕಾರದಲ್ಲಿ ನಡೆಯುತಿದ್ದು ಸೋಮವಾರ ಮಹಾರುದ್ರ ಯಾಗ ಸಹಿತ ವಿವಿಧ ಯಾಗಗಳು ನಡೆದವು.
ಬೆಳಿಗ್ಗೆ 108 ಕಾಯಿ ಗಣಪತಿಯಾಗ, ಲಕ್ಷ್ಮೀ ಸಹಸ್ರನಾಮಯಾಗ, ಶ್ರುತಧಾರಿಣೀಮಂತ್ರಯಾಗ, ಅಲಕ್ಷ್ಮೀನಾಶನ ಮಂತ್ರಯಾಗ, ಸುಕೃತಯಾಗ, ಶ್ರೀರೂಪಚಂಡೀಯಾಗ ನಡೆಯಿತು.


ಸಹಸ್ರಾರು ಮಂದಿ ಅನ್ಬಪ್ರಸಾದ ಭೋಜ ಸ್ವೀಕರಿಸಿದರು.


ಸಂಜೆ ಲೋಕೋದ್ಧಾರಕ ರಾಮತಾರಕಮಂತ್ರ ಮಹಾಮಂಡಲಪೂಜಾ, ಶ್ರೀ ಉಚ್ಚಂಗೀದೇವಿಯ ಬ್ರಹ್ಕಲಶಾಧಿವಾಸ, ಕಲಶಾಧಿಹೋಮ, ರಾಜಶ್ಯಾಮಲಾಮಂತ್ರಮಂಡಲಪೂಜಾ, ಪ್ರತ್ಯಂಗಿರಾ ಮಂತ್ರಹೋಮ, ಶೂಲಿನೀಮಂತ್ರಹೋಮ, ಬ್ರಹ್ಮಮಂಡಲಸೂತ್ರಪಾತ, ಅಗ್ರದುರ್ಗಾದೇವಿ ದೀಪನಮಸ್ಕಾರ, ಅಭೀಷ್ಟವರಪ್ರಾಪ್ತಿಕರ ಚಂಡೀಪುರಶ್ಚರಣಮ್, ಅಷ್ಟೋತ್ತರಶತ ಸಪ್ತಶತೀಪಾರಾಯಣಮ್, ಶ್ರೀಮಾತಂಗೀಕಲಾಮಾತೃಕಾ ಮಂಡಲೋಪಾಸನಮ್, ಶ್ರೀವಾರಾಹೀಕಲಾ ಮಾತೃಕಾಮಂಡಲಸಪರ್ಯಾ ಮೊದಲಾದ ವಿಧಿಗಳು ನಡೆದವು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್.ಜಿ ಗ್ರೂಫ್ಸ್ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪುಣೆ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್'ಬೆಟ್ಟು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಪು ದಿವಾಕರ ಶೆಟ್ಟಿ, ಪ್ರಮುಖರಾದ ಹರಿಯಪ್ಪ ಕೋಟ್ಯಾನ್, ಸುಗ್ಗಿ ಸುಧಾಕರ ಶೆಟ್ಟಿ, ರೋಶನ್‌ ಕುಮಾರ್ ಶೆಟ್ಟಿ, ಭಗವಾನ್ ದಾಸ್ ಶೆಟ್ಟಿಗಾರ್, ಸಂದೀಪ್ ಶೆಟ್ಟಿ ಮುಂಬಯಿ, ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ ಮೊದಲಾದವರಿದ್ದರು.


ಮಾ.4: ಉಚ್ಚಂಗಿ ಬ್ರಹ್ಮಕಲಶಾಭಿಷೇಕ
ಮಂಗಳವಾರ ಮಾರ್ಚ್ 4ರಂದು ಶ್ರೀ ಉಚ್ಚಂಗೀ ದೇವಿಯ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಸಾಕ್ಷಾತ್ ಗಂಗಾಭಾಗೀರಥಿಪೂಕಜನಮ್, ಪ್ರತ್ಯಕ್ಷ ಅಶ್ವಪೂಜಾ ಇತ್ಯಾದಿ ನಡೆಯಲಿದೆ.


ನವಾಶ್ವಪೂಜಾ
ಬೆಳಿಗ್ಗೆ 9ರಿಂದ ಅಶ್ವಮೇಧಸೂಕ್ತಯಾಗ ನಂತರ ನವ (ಒಂಬತ್ತು) ಪ್ರತ್ಯಕ್ಷ ಅಶ್ವ (ಕುದುರೆ)ಗಳಿಗೆ ಪೂಜೆ ನಡೆಯಲಿದೆ.


ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ವ್ಯವಸ್ಥಾಪನಾ ಸಮಿತಿ, ಉಪ ಸಮಿತಿ ಹಾಗೂ ಭಕ್ತಾದಿಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಪುವಿನ ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ಬ್ರಹ್ಮಕಲಶೋತ್ಸವ ಧಾರ್ಮಿಕ ಸಮಿತಿ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಶೆಟ್ಟಿಗಾರ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article