
ಪತ್ರಿಕಾ ವಿತರಕ ಬಾಲಕೃಷ್ಣ ಶೆಟ್ಟಿ ಅಪಘಾತದಲ್ಲಿ ದುರ್ಮರಣ
Monday, March 3, 2025
ಲೋಕಬಂಧು ನ್ಯೂಸ್
ಬ್ರಹ್ಮಾವರ: ಹಿರಿಯ ಪತ್ರಿಕಾ ವಿತರಕ, ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಪೇತ್ರಿ ಬಾಲಕೃಷ್ಣ ಶೆಟ್ಟಿ ನೂಜಿನಬೈಲು (72) ಸೋಮವಾರ ವೃತ್ತಿ ನಿರತರಾಗಿದ್ದ ಸಂದರ್ಭ ಕುಂಜಾಲು ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.
ಸರಳ, ಸಜ್ಜನಿಕೆಯ, ಸ್ನೇಹಮಯಿ ವ್ಯಕ್ತಿತ್ವದ ಹಿರಿಯ ಭಜಕರಾಗಿದ್ದ ಬಾಲಕೃಷ್ಣ ಶೆಟ್ಟಿ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ದು, ಪ್ರಸಕ್ತ ಬ್ರಹ್ಮಾವರ ತಾಲೂಕು ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾಗಿ, ಕನ್ನಾರು ಪೇತ್ರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಹಿರಿಯ ಸದಸ್ಯರಾಗಿ, ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೀಡುವ ಉಡುಪಿ ತಾಲೂಕು ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಂತಾಪ ಸೂಚಿಸಿದೆ.