ಕರ್ಣಾಟಕ ಬ್ಯಾಂಕ್ ವತಿಯಿಂದ ರಸಪ್ರಶ್ನೆ
Tuesday, March 11, 2025
ಲೋಕಬಂಧು ನ್ಯೂಸ್
ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆವರಣದ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ಣಾಟಕ ಬ್ಯಾಂಕ್ ಕುಂಜಿಬೆಟ್ಟು ಶಾಖೆ ವತಿಯಿಂದ ಶಾಲಾ ಮಕ್ಕಳಿಗಾಗಿ ಕರ್ಣಾಟಕ ಬ್ಯಾಂಕ್ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.ಶಾಲಾ ಸಂಸ್ಥಾಪಕ ಶ್ರೀ ಶ್ರೀ ರಮಾನಂದ ಗುರೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬ್ಯಾಂಕಿನ ಕುಂಜಿಬೆಟ್ಟು ಶಾಖಾಧಿಕಾರಿ ಪ್ರತೀಕ್, ಬ್ಯಾಂಕಿನ ಇತಿಹಾಸ ಮತ್ತು ಮಹತ್ವ ವಿವರಿಸಿದರು.
ಬ್ಯಾಂಕ್ ಸಿಬ್ಬಂದಿಗಳಾದ ಕಾವ್ಯ ವಾಗ್ಲೆ, ರಾಧಿಕಾ, ಸುಷ್ಮಾ, ಶ್ರುತಿ ಗೋರೆ, ಪ್ರಶಾಂತ್ ಅಡಿಗ, ಸುಪ್ರೀತ್ ತಂತ್ರಿ ಮತ್ತು ರಮೇಶ್ ನಾಯ್ಕ್ ಮಕ್ಕಳಿಗೆ ಬ್ಯಾಂಕಿಂಗ್ ವ್ಯವಹಾರ ಮಾಹಿತಿ ನೀಡಿದರು.
ವಿಜೇತ ವಿದ್ಯಾರ್ಥಿಗಳನ್ನು ಬ್ಯಾಂಕಿನ ಉಡುಪಿ ವಲಯ ಮುಖ್ಯಸ್ಥ ವಾದಿರಾಜ್ ಕೆ. ಮತ್ತು ಚೀಫ್ ಮ್ಯಾನೇಜರ್ ಪ್ರದೀಪ್ ಕುಮಾರ್ ಗೌರವಿಸಿದರು.
ಶ್ರೀ ರಮಾನಂದ ಗುರೂಜಿ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಪ್ರಾಂಶುಪಾಲೆ ಉಷಾ ರಮಾನಂದ ಸ್ವಾಗತಿಸಿ, ಸ್ವಾತಿ ಪ್ರತೀಕ್ ಪ್ರಾರ್ಥಿಸಿದರು. ಶಿಕ್ಷಕಿ ಚಂದ್ರಕಲಾ ಶರ್ಮ ವಂದಿಸಿದರು.
ಶಾಲಾ ಸಂಯೋಜಕಿ ಕುಸುಮ ನಾಗರಾಜ್ ಆಚಾರ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹನುಮಂತನಗರ ಕ್ಲಸ್ಟರ್'ನ ಸಂಪನ್ಮೂಲವ್ಯಕ್ತಿ ಲಲಿತಾ, ಶಾಲಾ ಶಿಕ್ಷಕಿಯರಾದ ರೇವತಿ, ಪ್ರತಿಮಾ ಆಚಾರ್ಯ, ತ್ರಿವೇಣಿ ಭಟ್, ಕಾವ್ಯ ಹೆಬ್ಬಾರ್, ಸುಚಿತ್ರ ರಾವ್, ತೀರ್ಥಕಲಾ, ಮೃಣಾಲ್ ಕೃಷ್ಣ ಉಪಸ್ಥಿತರಿದ್ದರು.