ನೇತ್ರಜ್ಯೋತಿ ಕಾಲೇಜಿಗೆ ಆರು ರ್ಯಾಂಕ್
Sunday, March 2, 2025
ಲೋಕಬಂಧು ನ್ಯೂಸ್
ಉಡುಪಿ: ಇಲ್ಲಿನ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಗೆ ರಾಜ್ಯ ಮಟ್ಟದಲ್ಲಿ ಆರು ರ್ಯಾಕ್ ಲಭಿಸಿದೆ.ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್'ನಲ್ಲಿ ರಕ್ಷಿತಾ ಮತ್ತು ಲಾವಣ್ಯ ಅನುಕ್ರಮವಾಗಿ ಒಂದು ಮತ್ತು ಮೂರನೇ ರ್ಯಾಂಕ್, ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್'ನಲ್ಲಿ ಪುರುಷೋತ್ತಮ ಬಡಿಗೇರ್, ಅಭಿಷೇಕ್ ಮತ್ತು ಕಾವ್ಯ ಎಂ. ನಾಯ್ಕ ಅನುಕ್ರಮವಾಗಿ ನಾಲ್ಕನೇ, ಆರನೇ ಹಾಗೂ ಎಂಟನೇ ರ್ಯಾಂಕ್ ಗಳಿಸಿದ್ದಾರೆ.
ಅಪರೇಶನ್ ಥಿಯೇಟರ್ ಮತ್ತು ಅರಿವಳಿಕೆ ತಂತ್ರಜ್ಞಾನದಲ್ಲಿ ಗಗನ್ ಯು. ಎಸ್. 8ನೇ ರ್ಯಾಂಕ್ ಪಡೆದಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಹಾಗೂ ಅರೆವೈದ್ಯಕೀಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧೆನೆಗೆ ಸಂಸ್ಥೆ ಸ್ಥಾಪಕಾಧ್ಯಕ್ಷ ನಾಡೋಜ ಡಾ.ಕೃಷ್ಣಪ್ರಸಾದ್ ಕೂಡ್ಲು, ಚೇರ್ಮನ್ ರಶ್ಮಿ ಕೃಷ್ಣಪ್ರಸಾದ್ ಹಾಗೂ ನಿರ್ದೇಶಕ ರಘುರಾಮ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.
ಕಾಲೇಜು ಕಳೆದ ಹಲವು ವರ್ಷಗಳಿಂದ ನಿರಂತರ ಸಾಧನೆ ತೋರುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ 15 ರ್ಯಾಂಕ್ ಬಂದಿತ್ತು.