ಶಾಸಕರ ಅಮಾನತು ಖಂಡನೀಯ
Saturday, March 22, 2025
ಲೋಕಬಂಧು ನ್ಯೂಸ್
ಬೆಂಗಳೂರು: ನ್ಯಾಯಕ್ಕಾಗಿ ಆಗ್ರಹಿಸಿದ ಶಾಸಕರನ್ನು ಅಮಾನತು ಲ ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್‌ನ ದುರುಳ ನೀತಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸದನದ ಹೊರಗೆ ಮಾತನಾಡಿದ ಅವರು, ಸದನದಲ್ಲಿ ಸಚಿವ ರಾಜಣ್ಣ ಹನಿಟ್ರ್ಯಾಪ್ ಆಗಿದೆ ಎಂದಾಗ ಕಾಂಗ್ರೆಸ್‌ನ ಇತರ ಸಚಿವರಿಗೆ, ಮುಖ್ಯಮಂತ್ರಿಗೆ ಅದು ಅಶ್ಲೀಲ ಎಂದು ಅನ್ನಿಸಲೇ ಇಲ್ಲ.
ಹಿಂದೆ ಶಾಸಕರು ಮೊಬೈಲ್ ನೋಡಿದ್ದಕ್ಕೆ ಕಾಂಗ್ರೆಸ್‌ನವರು ಎದ್ದು ಕುಣಿದಿದ್ದರು. ಆದರೆ, ಹನಿಟ್ರ್ಯಾಪ್ ಅಶ್ಲೀಲ ಎಂದು ಅನಿಸಿಲ್ಲ.
ಹನಿಟ್ರ್ಯಾಪ್ ಆಗಿರುವುದು ತಮ್ಮ ಪಕ್ಷದ ನಾಯಕರಿಂದಲೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.